ಸ್ಕೂಟರ್ ನ ಫೂಟ್ ರೆಸ್ಟ್ ಮೇಲೆ ಮಗುವನ್ನು ನಿಲ್ಲಿಸಿಕೊಂಡು ಪ್ರಯಾಣಿಸಿದ ತಾಯಿ: ಬೆಚ್ಚಿಬಿದ್ದ ಜನ - Mahanayaka

ಸ್ಕೂಟರ್ ನ ಫೂಟ್ ರೆಸ್ಟ್ ಮೇಲೆ ಮಗುವನ್ನು ನಿಲ್ಲಿಸಿಕೊಂಡು ಪ್ರಯಾಣಿಸಿದ ತಾಯಿ: ಬೆಚ್ಚಿಬಿದ್ದ ಜನ

bangalore
16/04/2024


Provided by

ಬೆಂಗಳೂರು: ದಂಪತಿ ಸ್ಕೂಟರ್ ನ ಫೂಟ್ ರೆಸ್ಟ್ ಮೇಲೆ ಮಗುವನ್ನು ನಿಲ್ಲಿಸಿಕೊಂಡು ಅಪಾಯಕಾರಿಯಾಗಿ ಪ್ರಯಾಣಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಿಲಿಕಾನ್ ಸಿಟಿಯ ವೈಟ್ ಫೀಲ್ಡ್ ನ ಮುಖ್ಯ ರಸ್ತೆಯಲ್ಲಿ ಈ  ಘಟನೆ ನಡೆದಿದೆ. ತಾಯಿ ಮಗುವನ್ನು ಬೈಕ್ ನ ಫೂಟ್ ರೆಸ್ಟ್ ಮೇಲೆ ನಿಲ್ಲಿಸಿ, ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ. ಸ್ವಲ್ಪ ಯಾಮಾರಿ ರಸ್ತೆಗೆ ಬಿದ್ದರೂ ಮಗುವಿನ ಜೀವಕ್ಕೆ ಅಪಾಯವಾಗುತ್ತಿತ್ತು.

Idiots on the road ಎಂಬ ಟೈಟಲ್ ನೀಡಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ.  ದಂಪತಿ ಈ ರೀತಿಯಲ್ಲಿ ಮಗುವನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ.

ಈ ದೃಶ್ಯವನ್ನು ಸ್ಕೂಟರ್ ನ ಹಿಂಬದಿಯಿಂದ ಬರುತ್ತಿದ್ದ ವಾಹನದವರು ಸೆರೆ ಹಿಡಿದಿದ್ದಾರೆ. ಸ್ಕೂಟರ್ ನ ನಂಬರ್ ಬರೆದು ಈ ವಿಡಿಯೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ