ಮಕ್ಕಳ ಜಗಳ ನಿಲ್ಲಿಸಲು ಬಂದ ತಾಯಿಯನ್ನೇ ಕೊಲೆಗೈದ ಪಾಪಿ ಮಗ! - Mahanayaka

ಮಕ್ಕಳ ಜಗಳ ನಿಲ್ಲಿಸಲು ಬಂದ ತಾಯಿಯನ್ನೇ ಕೊಲೆಗೈದ ಪಾಪಿ ಮಗ!

hubballi
30/05/2025


Provided by

ಹುಬ್ಬಳ್ಳಿ:  ಮಕ್ಕಳ ಜಗಳ ನಿಲ್ಲಿಸಲು ಬಂದ ತಾಯಿಯನ್ನು ಮಗನೇ ಗಾಜಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ  ಹುಬ್ಬಳ್ಳಿಯಲ್ಲಿ ನಡೆದಿದೆ.

ಪದ್ಮಾ ಚಲೂರಿ ಹತ್ಯೆಗೀಡಾದ ಮಹಿಳೆಯಾಗಿದ್ದಾರೆ. ತಾಯಿಯ ಸಾವಿಗೆ ಕಾರಣವಾದ ಇಬ್ಬರು ಮಕ್ಕಳನ್ನು ಲಕ್ಷ್ಮಣ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿ ನಗರದ ತೊರವಿಹಕ್ಕಲ್​ ಬಡಾವಣೆ ಈ ಘಟನೆ ನಡೆದಿದೆ. ಮಂಜುನಾಥ್​ ಮತ್ತು ಲಕ್ಷ್ಮಣ್​ ಮನೆಯ ಕೆಳಗೆ ಕಟಿಂಗ್ ಶಾಪ್​ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರು ಅದರಲ್ಲೇ ಕೆಲಸ ಮಾಡುತ್ತಿದ್ದರು. ಆದರೆ ನಿನ್ನೆ(ಮೇ.29) ಮಂಜುನಾಥ ಮತ್ತು ಲಕ್ಷ್ಮಣ್ ನಡುವೆ ನೂರು ರೂಪಾಯಿ ವಿಚಾರಕ್ಕೆ ಜಗಳ ಆರಂಭವಾಗಿದೆ. ಬಳಿಕ ಪೊಲೀಸ್ ಠಾಣೆವರೆಗೂ ಈ ಜಗಳ ಹೋಗಿತ್ತು.

ಬಳಿಕ ನಾವೇ ಗಲಾಟೆ ಬಗೆ ಹರಿಸಿಕೊಳ್ಳುವುದಾಗಿ ವಾಪಸ್ ಬಂದಿದ್ದರು. ಮಧ್ಯರಾತ್ರಿ 1 ಗಂಟೆ ಸಮಯಕ್ಕೆ ಮಂಜುನಾಥ್​ ಮತ್ತೆ ಲಕ್ಷ್ಮಣ್​ ಜೊತೆ ಜಗಳ ಆರಂಭಿಸಿದ್ದಾರೆ. ಈ ವೇಳೆ ತಾಯಿ ತಡೆಯಲು ಮುಂದಾಗಿದ್ದಾರೆ.  ಈ ವೇಳೆ ಪುತ್ರ ಮಂಜುನಾಥ್ ಕಿಟಕಿಗೆ ಅಳವಡಿಸಲು ತಂದಿದ್ದ ಗಾಜಿನಿಂದ ತಾಯಿ ಪದ್ಮಾ ಅವರಿಗೆ ಇರಿದಿದ್ದಾನೆ.

ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಪದ್ಮಾ ಅವರನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇಂದು ಬೆಳಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.   ಕಮರಿಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ