ಕಾರು—ಬೈಕ್‌ ನಡುವೆ ಭೀಕರ ಅಪಘಾತ: ಬೈಕ್‌ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು - Mahanayaka
10:28 PM Friday 12 - December 2025

ಕಾರು—ಬೈಕ್‌ ನಡುವೆ ಭೀಕರ ಅಪಘಾತ: ಬೈಕ್‌ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

car bike accident
05/12/2023

ಚಿಕ್ಕಮಗಳೂರು:  ಕಾರು ಮತ್ತು ಬೈಕ್‌ ನ ನಡುವೆ ನಡೆದ ಮುಖಾಮುಖಿ ಡಿಕ್ಕಿಯ ಪರಿಣಾಮ ಬೈಕ್‌ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕಪಟ್ಟಣಗೆರೆ ಗೇಟ್ ಬಳಿ ನಡೆದಿದೆ.

ನಯನ (26) ಮನು (27) ಮೃತ ದುರ್ದೈವಿಗಳಾಗಿದ್ದಾರೆ.  ಕಡೂರಿನಿಂದ–ಚಿಕ್ಕಮಗಳೂರಿಗೆ ಹೋಗುತ್ತಿದ್ದ ಬೈಕ್  ಹಾಗೂ ಎದುರಿನಿಂದ ಬಂದ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ  ಪ್ರಕರಣ ಸಂಭವಿಸಿದೆ.

ಇತ್ತೀಚಿನ ಸುದ್ದಿ