ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್! - Mahanayaka

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಟ್ವಿಸ್ಟ್!

prajwal revanna
30/04/2024

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರಕಿದ್ದು,  ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳಿರುವ ಪೆನ್ ಡ್ರೈವ್ ನ್ನು ಬಿಜೆಪಿ ಮುಖಂಡ, ವಕೀಲರೂ ಆಗಿರುವ ದೇವರಾಜೇಗೌಡಗೆ ಬಿಟ್ಟು ಬೇರೆ ಯಾರಿಗೂ ನಾನು ನೀಡಿಲ್ಲ ಎಂದು  ಪ್ರಜ್ವಲ್ ನ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದಾರೆ.

ಪ್ರಜ್ವಲ್ ನ ರಾಸಲೀಲೆಯ ವಿಡಿಯೋಗಳಿರುವ ಪೆನ್ ಡ್ರೈವ್ ನ್ನು  ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗೆ ನೀಡಿದ ನಂತರ ನನಗೆ ನೀಡಿದ್ದಾರೆ ಎನ್ನುವ ದೇವರಾಜೇಗೌಡ ಹೇಳಿಕೆಯ ನಂತರ ಈ ಬಗ್ಗೆ ಕಾರ್ತಿಕ್ ಸ್ಪಷ್ಟನೆ ನೀಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಜೊತೆ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದೆ. ನನ್ನ ಮೇಲೆ ದೌರ್ಜನ್ಯ ಮಾಡಿ ಜಮೀನು ಬರೆಸಿಕೊಂಡು, ನನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ ನಾನು ಅವರ ಮನೆಯಿಂದ ಹೊರ ಬಂದಿದ್ದೆ. ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಿ ಹೋರಾಟ ಮಾಡುವ ತಯಾರಿ ಮಾಡಿದ್ದೆ.

ಹೀಗಾಗಿ ಬಿಜೆಪಿ ಮುಖಂಡರ ದೇವರಾಜೇಗೌಡ ಅವರ ಬಳಿ ಕಷ್ಟ ಹೇಳಿಕೊಂಡಿದ್ದೆ. ಆಗ ಅವರು ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆದರೆ, ಕೇಸ್ ತೆಗೆದುಕೊಂಡಿರಲಿಲ್ಲ. ಬೇರೆ ಲಾಯರ್ ಬಳಿ ಕೇಸ್ ಹಾಕಿದಾಗ  ಕೋರ್ಟ್ ಹೋರಾಟ ಮಾಡಿದ್ರೆ ನಿನಗೆ ನ್ಯಾಯ ಸಿಗುವುದಿಲ್ಲ, ಜನರಿಗೆ ಗೊತ್ತಾಗಬೇಕು ಎಂದಿದ್ದರು. ಹೀಗಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಡಿಸಿದ್ದರು.

ಇದಾದ ನಂತರ ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡದಂತೆ ನನ್ನ ವಿರುದ್ಧ ಸ್ಟೇ ತಂದರು. ಈ ವೇಳೆ ದೇವರಾಜೇಗೌಡರ ಬಳಿ ಹೋದಾಗ ನಿನ್ನ ಬಳಿ ಏನೋ ವಿಡಿಯೋ ಇದೆಯಂತೆ ಅದಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದ್ದರು. ಆ ವಿಡಿಯೋ ಕೊಡು ಜಡ್ಜ್ ಮುಂದೆ ಪ್ರಸ್ತುತ ಪಡಿಸುತ್ತೇನೆ ಎಂದು ಪಡೆದುಕೊಂಡು ಇದೀಗ  ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂದು ಕಾರ್ತಿಕ್ ಆರೋಪಿಸಿದ್ದಾರೆ.

ಇದಾದ  ಬಳಿಕ ಹಾಸನ ಸರ್ಕಲ್ ನಲ್ಲಿ ರಾಸಲೀಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದರು. ಆಗ ನಾನು ಅವರ ಬಳಿ ಹೋಗಿ ಯಾಕೆ ಹೀಗೆ ಮಾಡಿದ್ದೀರಿ ಎಂದು ಕೇಳಿದ್ದೆ. ಆಗ ಅವರು ನಿನಗೂ ಇದಕ್ಕೂ ಸಂಬಂಧವಿಲ್ಲ ಸುಮ್ಮನಿರು ಎಂದಿದ್ದರು ಎಂದು ಕಾರ್ತಿಕ್ ಹೇಳಿದ್ದಾರೆ.


Provided by

ಈ ಎಲ್ಲ ಬೆಳವಣಿಗೆಗಳ ನಂತರ ಪ್ರಜ್ವಲ್​​ಗೆ ಟಿಕೆಟ್ ಕೊಡದಂತೆ ಬಿಜೆಪಿ ಹೈಕಮಾಂಡ್​​ ಗೆ ದೇವರಾಜೇಗೌಡ ಪತ್ರ ಬರೆದಿದ್ದರು. ಅದರ ಕಾಪಿಯನ್ನು ನನಗೂ ಕಳುಹಿಸಿದ್ದರು. ಕೋರ್ಟ್​​ನಲ್ಲಿ ನ್ಯಾಯ ಸಿಗದಿದ್ದರೆ ಈ ರೀತಿ ಸಿಗುತ್ತದೆ ಎಂದಿದ್ದರು. ಹೇಗಾದರೂ ಸರಿ, ನ್ಯಾಯ ಸಿಗಲಿ ಎಂದು ನಾನು ಸುಮ್ಮನಿದ್ದೆ. ಆದರೆ, ನೆನ್ನೆ ಅವರು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ