ಕೊಳೆತ ಸ್ಥಿತಿಯಲ್ಲಿ ಒಂಟಿ ಸಲಗದ ಮೃತದೇಹ ಪತ್ತೆ: ಅನುಮಾನಾಸ್ಪದವಾಗಿ ಸಾವಿಗೀಡಾದ ಕಾಡಾನೆ - Mahanayaka
11:20 PM Wednesday 15 - October 2025

ಕೊಳೆತ ಸ್ಥಿತಿಯಲ್ಲಿ ಒಂಟಿ ಸಲಗದ ಮೃತದೇಹ ಪತ್ತೆ: ಅನುಮಾನಾಸ್ಪದವಾಗಿ ಸಾವಿಗೀಡಾದ ಕಾಡಾನೆ

elephant
31/01/2025

ಸಕಲೇಶಪುರ: ಒಂಟಿ ಸಲಗವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಕಲೇಶಪುರ, ಮೂಡಿಗೆರೆ ಗಡಿಭಾಗದ ಗ್ರಾಮವಾದ ಮರಗುಂದದಲ್ಲಿ ನಡೆದಿದೆ.


Provided by

ಸಕಲೇಶಪುರ ಅರಣ್ಯ ವಲಯ ವ್ಯಾಪ್ತಿಯ ದೇವಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗುಂದ ಗ್ರಾಮದ ಸಮೀಪ ಅರಣ್ಯದಲ್ಲಿ ಕಾಡಾನೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ.

ಮರಗುಂಡ ಬೆಟ್ಟದಭೈರವೇಶ್ವರ ದೇವಸ್ಥಾನದ ಸಮೀಪದ ಅರಣ್ಯದಲ್ಲಿ ಆನೆಯ ಮೃತದೇಹ ಬಂಡೆಕಲ್ಲುಗಳ ನಡುವೆ ಪತ್ತೆಯಾಗಿದೆ. ಆನೆ ಸಾವನ್ನಪ್ಪಿ ಅಂದಾಜು ಒಂದು ತಿಂಗಳು ಆಗಿರಬಹುದು ಎನ್ನಲಾಗಿದೆ.

ಕಾಡಾನೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಶನಿವಾರ ಮುಂಜಾನೆ ಮೃತದೇಹದ ಕೊಳೆತ ವಾಸನೆ ಬಂದಿದ್ದರಿಂದ ಆನೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ನೀಡಿದ ಮಾಹಿತಿಯನ್ನು ಆದರಿಸಿ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮಹಜರು ನಡೆಸಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ ಇದು ಒಂಟಿಕೊಂಬಿನ ಆನೆಯಾಗಿದ್ದು, ಕಳೆದ ಐದಾರು ವರ್ಷಗಳಿಂದ ಈ ಭಾಗದಲ್ಲಿ ಓಡಾಡಿಕೊಂಡಿತ್ತು. ಜನರಿಗೆ ಹೆಚ್ಚೇನು ತೊಂದರೆ ಕೊಡುತ್ತಿರಲಿಲ್ಲ ಎಂದು ಹೇಳುತ್ತಾರೆ.

ಕಾಡಾನೆ ಬಂಡೆ ಕಲ್ಲುಗಳ ನಡುವೆ ಸಿಲುಕಿ ಹೊರಬರಲಾರದೇ ಸಾವನ್ನಪ್ಪಿರಬಹುದು ಆಥವಾ ಬೇರೆ ಆನೆಗಳ ಜೊತೆ ಕಾದಾಡಿ ಸಾವನ್ನಪ್ಪಿರಬಹುದಾ, ಅನಾರೋಗ್ಯದಿಂದ ಸಾವನ್ನಪ್ಪಿರಬಹುದ ಅಥವಾ ಬೇರೆ ಯಾವ ರೀತಿಯಲ್ಲಾದರೂ ಸಾವನ್ನಪ್ಪಿರಬಹುದಾ ಎಂಬುದು ಮರಣೋತ್ತರ ಪರೀಕ್ಷೆ ಮತ್ತು ತನಿಖೆಯಿಂದಷ್ಟೇ ತಿಳಿದುಬರಬೇಕು. ಆನೆಯ ಒಂಟಿ ದಂತವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬೇರ್ಪಡಿಸಿ ಇಲಾಖೆಯ ಸುಪರ್ದಿಗೆ ತೆಗೆದುಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ