ಸರಣಿ ಅಪಘಾತ: ಮೂವರು ಪ್ರಯಾಣಿಕರ ದಾರುಣ ಸಾವು - Mahanayaka
1:44 PM Thursday 6 - February 2025

ಸರಣಿ ಅಪಘಾತ: ಮೂವರು ಪ್ರಯಾಣಿಕರ ದಾರುಣ ಸಾವು

jamakhandi
01/02/2025

ಬಾಗಲಕೋಟೆ: ಟಾಟಾ ಏಸ್, ಕಾರು ಹಾಗೂ ಎರಡು ಬೈಕ್ ಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ  ಮೂವರು ಸಾವಿಗೀಡಾದ ದಾರುಣ ಘಟನೆ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದಿದೆ.

ಟಾಟಾ ಏಸ್ ಕಾರು ಜಮಖಂಡಿಯಿಂದ ವಿಜಯಪುರಕ್ಕೆ ತೆರಳುತ್ತಿತ್ತು. ವಿಜಯಪುರದಿಂದ ಜಮಖಂಡಿಗೆ ಕಾರು ಬರುತ್ತಿದ್ದು, ಈ ವೇಳೆ ಅಪಘಾತ ಸಂಭವಿಸಿದೆ. ಟಾಟಾ ಏಸ್ ನ ಹಿಂಬದಿಯಿಂದ ಬರುತ್ತಿದ್ದ ಎರಡು ಬೈಕ್ ಗಳು ಕೂಡ ಅಪಘಾತಕ್ಕೀಡಾಗಿವೆ.

ಅಪಘಾತದಲ್ಲಿ ಟಾಟಾ ಏಸ್, ಕಾರು ಹಾಗೂ ಬೈಕ್ ನಲ್ಲಿದ್ದ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಮೃತರ ವಿವರಗಳು ಇನ್ನೂ ಲಭ್ಯವಾಗಿಲ್ಲ. ಗುರುತುಪತ್ತೆ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್ ಐ ಗಂಗಾಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ