ಪ್ರಜ್ವಲ್ ರೇವಣ್ಣರನ್ನು ನೋಡಲು ಜೈಲಿಗೆ ಆಗಮಿಸಿದ ಮಹಿಳೆ!

ಬೆಂಗಳೂರು: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಇದೀಗ ಪ್ರಜ್ವಲ್ ರೇವಣ್ಣ ಅವರನ್ನು ನೋಡಲು ಸ್ವಕ್ಷೇತ್ರ ಹಾಸನದ ಹೊಳೆನರಸೀಪುರದಿಂದ ಮಹಿಳೆಯೊಬ್ಬರು ಜೈಲಿಗೆ ಆಗಮಿಸಿದ ಘಟನೆ ನಡೆದಿದೆ.
ಇನ್ನೂ ಜೈಲಿಗೆ ಬಂದ ಮಹಿಳೆಯನ್ನು ಸಿಬ್ಬಂದಿ ಚೆಕ್ ಪೋಸ್ಟ್ ಬಳಿಯೇ ತಡೆದಿದ್ದು, ಪ್ರಜ್ವಲ್ ರೇವಣ್ಣ ಭೇಟಿಗೆ ಅವಕಾಶ ನಿರಾಕರಿಸಲಾಯಿತು.
ಇದೇ ವೇಳೆ ಮಾತನಾಡಿದ ಮಹಿಳೆ, ಕಷ್ಟದಲ್ಲಿ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಸಹಾಯ ಮಾಡಿದ್ದರು. ಹೀಗಾಗಿ ಅವರನ್ನು ನೋಡಲು ಬಂದಿರುವುದಾಗಿ ಮಹಿಳೆ ಹೇಳಿದರು.
ನನ್ನ ಗಂಡ ನಡು ರಸ್ತೆಯಲ್ಲಿ ನನ್ನನ್ನು ಕೊಲೆ ಮಾಡಲು ಬಂದಿದ್ದ. ಆಗ ನಾನು ರೇವಣ್ಣ ಮನೆಯವರ ಬಳಿ ಸಹಾಯ ಕೇಳಿದ್ದೆ. ಆಗ ನನಗೆ ಪ್ರಜ್ವಲ್ ರೇವಣ್ಣ ಅವರು ಸಹಾಯ ಮಾಡಿದ್ದರು. ಹೀಗಾಗಿ ನಾನು ಅವರನ್ನು ನೋಡಲು ಬಂದಿದ್ದೇನೆ ಎಂದು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97