ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ ಮಹಿಳೆ! - Mahanayaka

ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಿದ ಮಹಿಳೆ!

airport
27/11/2023

ಬೆಂಗಳೂರು: ನಕಲಿ ಟಿಕೆಟ್ ತೋರಿಸಿ ಮಹಿಳೆಯೊಬ್ಬಳು  ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿದ ಘಟನೆ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ  ನಡೆದಿದೆ.

ಅಕ್ರಮವಾಗಿ ವಿಮಾನ ನಿಲ್ದಾಣ ಪ್ರವೇಶಿಸಿದ್ದ ಮಹಿಳೆಯನ್ನು ಹರ್ಪಿತ್ ಕೌರ್ ಸೈನಿ ಎಂದು ಗುರುತಿಸಲಾಗಿದೆ. ಮಹಿಳೆ ಆಯುಷ್ ಶರ್ಮ ಎಂಬಾತನನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಬಂದಿದ್ದಳು. ಈ ವೇಳೆ ನಕಲಿ ಟಿಕೆಟ್ ತೋರಿಸಿ ಪಿಇಎಸ್‍ಸಿವರೆಗೂ ಹೋಗಿದ್ದಳು.

ಬಳಿಕ ಲ್ಯಾಪ್‍ಟಾಪ್ ಕಳೆದುಹೋಗಿದೆ ಎಂದು ಹೊರಗೆ ಬಂದಿದ್ದಳು. ಈ ವೇಳೆ ಅನುಮಾನಗೊಂಡ ಸಿಬ್ಬಂದಿ ಟಿಕೆಟ್ ಪರಿಶೀಲನೆ ನಡೆಸಿದಾಗ ನಕಲಿ ಟಿಕೆಟ್ ಎನ್ನುವುದು ತಿಳಿದು ಬಂದಿದೆ. ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್  ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚಿನ ಸುದ್ದಿ