ಶ್ರದ್ಧಾ ಹತ್ಯೆ ಪ್ರಕರಣ: ಫ್ರೀಝರ್ ನಲ್ಲಿ ಮೃತದೇಹ ಇದ್ದ ಸಂದರ್ಭದಲ್ಲೂ ಮತ್ತೋರ್ವ ಮಹಿಳೆಯನ್ನು ಕರೆತಂದಿದ್ದ
ದೆಹಲಿ: ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿಯನ್ನು ತುಂಡು ತಂಡಾಗಿ ಕತ್ತರಿಸಿ ಹತ್ಯೆ ಮಾಡಿದ ಭೀಕರ ಘಟನೆ ದೆಹಲಿಯಲ್ಲಿ ನಡೆದಿದ್ದು, ಪ್ರಕರಣದ ಆರೋಪಿಯ ಕೃತ್ಯಗಳು ಇದೀಗ ಸಾರ್ವಜನಿಕರ ಮೈನಡುಗಿಸಿದೆ.
26 ವರ್ಷದ ಶ್ರದ್ಧಾ ಮುಂಬೈನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕಾಲ್ ಸೆಂಟರ್ ನಲ್ಲಿ ಕೆಲಸಕ್ಕೆ ಸೇರಿದ್ದು ಅಲ್ಲಿ ಅಫ್ತಾಬ್ ಎಂಬಾತನ ಪರಿಚಯವಾಗಿದೆ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದ್ದು ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಮನೆಯಲ್ಲಿ ಈ ಸಂಬಂಧಕ್ಕೆ ಒಪ್ಪಿಗೆ ದೊರೆಯದ ಕಾರಣ ಇಬ್ಬರೂ ದೆಹಲಿಯಲ್ಲಿ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಜೊತೆಯಾಗಿ ವಾಸವಾಗಿದ್ದರು.
ನವೆಂಬರ್ 8 ರಿಂದ ಮಗಳು ಫೋನ್ ಕರೆ ಸ್ವೀಕರಿಸದ ಕಾರಣ ತಂದೆ ದೆಹಲಿಗೆ ಬಂದು ನೋಡಿದಾಗ ಮನೆಗೆ ಬೀಗ ಹಾಕಿತ್ತು. ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮದುವೆ ವಿಷಯದಲ್ಲಿ ಇಬ್ಬರ ನಡುವೆ ಪದೇಪದೆ ಜಗಳ ಆಗುತ್ತಿದ್ದು, ಚೆಪ್ (ಅಡುಗೆ ಮುಖಸ್ಥ) ಆಗಿ ಅನುಭವ ಹೊಂದಿದ್ದ ಅಫ್ತಾಬ್ ಚಾಕುವಿನಿಂದ ಇರಿದು ಕೊಂದು ನಂತರ ಈ ಕೃತ್ಯ ಎಸಗಿದ್ದಾನೆ.
ಇನ್ನೂ ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕ ಆರೋಪಿಯು ಆಕೆಯ ಮೃತದೇಹವನ್ನು ಫ್ರಿಝರ್ ನಲ್ಲಿ ಇಟ್ಟಿದ್ದು, ದಿನಕ್ಕೊಂದು ಜಾಗದಲ್ಲಿ ದೇಹದ ಭಾಗಗಳನ್ನು ಎಸೆಯುತ್ತಿದ್ದ. ಒಂದೆಡೆಯಲ್ಲಿ ಪೊಲೀಸರು ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದರೆ, ಇನ್ನೊಂದೆಡೆ ಈತ ಮತ್ತೊಂದು ಮಹಿಳೆಯ ಜೊತೆಗೆ ಸಂಬಂಧ ಆರಂಭಿಸಿದ್ದ.
ಶ್ರದ್ಧಾ ಹತ್ಯೆಯ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ತನ್ನ ಅಪಾರ್ಟ್ ಮೆಂಟ್ ಗೆ ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಪರಿಚಯ ಮಾಡಿಕೊಂಡಿದ್ದ ಮಹಿಳೆಯನ್ನು ಕರೆ ತಂದಿದ್ದ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಆ ಮಹಿಳೆ ವೃತ್ತಿಯಲ್ಲಿ ಮನಶ್ಶಾಸ್ತ್ರಜ್ಞರಾಗಿದ್ದರು. ಈ ಮಹಿಳೆ ಜೂನ್ ಮತ್ತು ಜುಲೈನಲ್ಲಿ ಒಂದೆರಡು ಬಾರಿ ಈತನ ಅಪಾರ್ಟ್ ಮೆಂಟ್ ಗೆ ಭೇಟಿ ನೀಡಿದ್ದರು.
ಮಹಿಳೆ ಹಾಗೂ ಅಫ್ತಾಬ್ ನ ಸಂಬಂಧದ ವೇಳೆಯೂ ಆತನ ಮನೆಯ ಫ್ರೀಝರ್ ಹಾಗೂ ಅಡುಗೆ ಮನೆಯಲ್ಲಿ ಶ್ರದ್ಧಾಳ ದೇಹದ ಭಾಗಗಳಿದ್ದವು ಎನ್ನುವ ವಿಚಾರಗಳನ್ನು ಆರೋಪಿ ತಿಳಿಸಿದ್ದಾನೆ ಎಂದು ಹೇಳಲಾಗಿದೆ.
ಶ್ರದ್ಧಾಳ ಸಾವಿನ ನಂತರ ಶ್ರದ್ಧಾ ತನ್ನ ಫೋನ್ ನಲ್ಲಿ ಸ್ವೀಕರಿಸಿದ ಸಂದೇಶಗಳಿಗೆ ಅಫ್ತಾಬ್ ಉತ್ತರಿಸಿದ್ದಾನೆ ಎಂದು ವರದಿಗಳು ತಿಳಿಸಿವೆ. ಅವನು ಅವಳ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಪಾವತಿಸಿದ್ದ. ಅವನು ಅವಳ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಲಾಗಿನ್ ಆಗಿ ಅವಳು ಜೀವಂತವಾಗಿದ್ದಾಳೆ ಎಂಬ ಭಾವನೆಯನ್ನು ನೀಡಲು ಅವಳ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka