ಪ್ರೀತಿಸಿ ಮೋಸ ಮಾಡಿದ ಯುವಕನ ಮೇಲೆ ಯುವತಿಯಿಂದ ಆ್ಯಸಿಡ್ ದಾಳಿ!

ಉತ್ತರ ಪ್ರದೇಶ: ಪ್ರೀತಿಸಿ ಮೋಸ ಮಾಡಿ ಬೇರೆ ಮದುವೆಯಾಗಲು ಮುಂದಾದ ಯುವಕನಿಗೆ ಯುವತಿಯೋರ್ವಳು ಆ್ಯಸಿಡ್ ಎರಚಿದ ಘಟನೆ ಉತ್ತರಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಪ್ರಿಯಕರನ ಮದುವೆಯ ಮೆರವಣಿಗೆಯ ವೇಳೆ ಯುವತಿ ವೇಷ ಮರೆಸಿಕೊಂಡು ಬಂದು ಆತನ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ. ತಕ್ಷಣವೇ ಆತನನ್ನು ಕುಟುಂಬಸ್ಥರು ಹತ್ತಿರದ ಜಿಲ್ಲಾಸ್ಪತ್ರೆಗೆ ದಾಖಲಿದ್ದಾರೆ.
ಅದೃಷ್ಟವಶಾತ್ ಯುವಕನಿಗೆ ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಷ್ಟೇ ಆಗಿವೆ ಎಂದು ಹೇಳಲಾಗಿದೆ. ಹೀಗಾಗಿ ಚಿಕಿತ್ಸೆಯ ಬಳಿಕ ಯುವಕನನ್ನು ಸಂಬಂಧಿಕರು ಮನೆಗೆ ಕರೆತಂದಿದ್ದಾರೆ.
ಆ್ಯಸಿಡ್ ಎರಚಿದ ಬಳಿಕ ಯುವತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾಳೆ. ಆದರೆ ಮದುವೆಗೆ ಆಗಮಿಸಿದ್ದ ಮಹಿಳೆಯರು ಆಕೆಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಯುವಕ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಇವರ ನಡುವೆ ದೈಹಿಕ ಸಂಪರ್ಕವೂ ನಡೆದಿತ್ತು. ಆದರೆ, ಎರಡೂ ಕುಟುಂಬಗಳಿಗೂ ಇವರಿಬ್ಬರ ಮದುವೆಯ ಬಗ್ಗೆ ವಿರೋಧವಿತ್ತು. ಏಪ್ರಿಲ್ 22 ರಂದು ಯುವಕನ ಮನೆಯವರು ಬೇರೆ ಯುವತಿಯೊಂದಿಗೆ ಮದುವೆ ಮಾಡಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದರು.
ಇದರಿಂದ ಕೋಪಗೊಂಡ ಯವತಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ ವೇಷ ಮರೆಸಿ ಮೆರವಣಿಗೆಯಲ್ಲಿ ಸೇರಿಕೊಂಡು ಆತನ ಮೇಲೆ ಆ್ಯಸಿಡ್ ಎರಚಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಕೇಸು ದಾಖಲಾಗಿದ್ದು, ಯುವತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth