ಶೂಟಿಂಗ್ ವೇಳೆ ರೋಪ್ ಕ್ಯಾಮರಾ ಕಟ್ ಆಗಿ ನಟ ಸೂರ್ಯ ಅವರ ಭುಜಕ್ಕೆ ಗಾಯ: ಜೈ ಭೀಮ್ ಖ್ಯಾತಿಯ ನಟ - Mahanayaka

ಶೂಟಿಂಗ್ ವೇಳೆ ರೋಪ್ ಕ್ಯಾಮರಾ ಕಟ್ ಆಗಿ ನಟ ಸೂರ್ಯ ಅವರ ಭುಜಕ್ಕೆ ಗಾಯ: ಜೈ ಭೀಮ್ ಖ್ಯಾತಿಯ ನಟ

soorya
23/11/2023


Provided by

ಜೈ ಭೀಮ್ ಖ್ಯಾತಿಯ ತಮಿಳುನಟ ಸೂರ್ಯ ಅವರಿಗೆ ಶೂಟಿಂಗ್ ವೇಳೆ ನಡೆದ ಅವಘಡದಲ್ಲಿ ಗಾಯವಾಗಿರುವ ಬಗ್ಗೆ ವರದಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅಪಾಯದಿಂದ ಅವರು ಪಾರಾಗಿದ್ದಾರೆ.

ನಿನ್ನೆ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಶೂಟಿಂಗ್ ನಡೆಯುತ್ತಿತ್ತು. ಬಿಲ್ಡ್—ಅಪ್ ಶಾಟ್ ತೆಗೆಯುತ್ತಿದ್ದ ವೇಳೆ ರೋಪ್ ಕ್ಯಾಮರಾ ಕಟ್ ಆಗಿದ್ದು, ನಟ ಸೂರ್ಯ ಅವರ ಹೆಗಲಿಗೆ ಬಿದ್ದಿದೆ. ಪರಿಣಾಮವಾಗಿ ಅವರಿಗೆ ಗಾಯವಾಗಿದೆ. ಜೊತೆಗೆ ಇತರ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ದೊಡ್ಡ ಅನಾಹುತವೊಂದರಿಂದ ಅವರು ತಪ್ಪಿಸಿಕೊಂಡಿದ್ದಾರೆ. ಯಾವುದೇ ಅಪಾಯವಾಗದೇ ಸುರಕ್ಷಿತವಾಗಿದ್ದಾರೆ.

ನಟ ಸೂರ್ಯ ಅವರಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಶೂಟಿಂಗ್ ಅರ್ಧದಲ್ಲೇ ನಿಲ್ಲಿಸಲಾಗಿದೆ. ಅವರಿಗೆ 2 ವಾರಗಳ ಕಾಲ ಬೆಡ್ ರೆಸ್ಟ್ ನೀಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಿರುತೈ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಕಂಗುವಾ” ಸಿನಿಮಾದಲ್ಲಿ ನಟಿ ದಿಶಾ ಪಟಾನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ನಟ ಸೂರ್ಯ ಈ ಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಇದು 2024 ಬಹು ನಿರೀಕ್ಷಿತ ಚಲನ ಚಿತ್ರಗಳಲ್ಲಿ ಒಂದಾಗಿದೆ.

ಇತ್ತೀಚಿನ ಸುದ್ದಿ