ಕೊನೆಯ ಚಿತ್ರದಲ್ಲಿ 200 ಕೋಟಿ ದಾಖಲೆಯ ಸಂಭಾವನೆ ಪಡೆಯಲಿದ್ದಾರೆ ನಟ ವಿಜಯ್!

ಸಿನಿಮಾ ಕ್ಷೇತ್ರ ತೊರೆದು ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವ ತಮಿಳು ನಟ ವಿಜಯ್ ಅವರು ತಮ್ಮ ಕೊನೆಯ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ತಮ್ಮ ಕೊನೆಯ ಚಿತ್ರದಲ್ಲಿ ವಿಜಯ್ ದಾಖಲೆಯ ಸಂಭಾವನೆ ಪಡೆದುಕೊಳ್ಳಲಿದ್ದಾರಂತೆ.
ಹೌದು..! “ತಮಿಳಗ ವೆಟ್ರಿ ಕಳಗಂ” ಪಕ್ಷ ಸ್ಥಾಪನೆಯ ಬಳಿಕ ವಿಜಯ್ ಅವರು ಸಿನಿಮಾ ಕ್ಷೇತ್ರ ತೊರೆಯಲಿದ್ದಾರೆ ಎನ್ನಲಾಗಿದೆ. ವಿಜಯ್ ಅವರು ಹೊಸ ಪಕ್ಷ ಸ್ಥಾಪನೆ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆಯಾಗಿತ್ತು. ಆದ್ರೆ, ಪಕ್ಷ ಸ್ಥಾಪನೆಯ ಬಳಿಕ ವಿಜಯ್ ಸಿನಿಮಾ ಕ್ಷೇತ್ರವನ್ನು ಬಿಡಲಿದ್ದಾರೆ ಅನ್ನೋದು ಅಭಿಮಾನಿಗಳಿಗೆ ಬೇಸರ ತಂದಿದೆ.
ಈ ನಡುವೆ ವಿಜಯ್ ತಮ್ಮ ಕೊನೆಯ ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರದ ಮೇಲೆ ಇದೀಗ ಎಲ್ಲರ ಕಣ್ಣಿದ್ದು, ಈ ಚಿತ್ರದಲ್ಲಿ ನಟಿಸಲು ವಿಜಯ್ ಬರೋಬ್ಬರಿ 200 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ವಿಜಯ್ ಅವರು ಈವರೆಗೆ 68 ಚಿತ್ರಗಳಲ್ಲಿ ನಟಿಸಿದ್ದಾರೆ. 69ನೇ ಚಿತ್ರ ಅವರ ಕೊನೆ ಚಿತ್ರವಾಗಲಿದೆ ಎನ್ನಲಾಗಿದೆ. ತಮ್ಮ ಕೊನೆಯ ಚಿತ್ರದಲ್ಲಿ ಭಾರತೀಯ ಚಿತ್ರರಂಗದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಖ್ಯಾತಿಗೆ ವಿಜಯ್ ಪಾತ್ರವಾಗಲಿದ್ದಾರೆ.
ಅಂದ ಹಾಗೆ ವಿಜಯ್ ಅವರ ಕೊನೆಯ ಚಿತ್ರಕ್ಕೆ ಡಿವಿವಿ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. ವೆಟ್ರಿ ಮಾರನ್ ಅಥವಾ ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿದೆ.