ನಟಿ ಶುಭಾ ಪೂಂಜಾ ಜೊತೆಗೆ ಯುವಕರಿಂದ ಅಸಭ್ಯ ವರ್ತನೆ: ಕೊರಗಜ್ಜ ಚಿತ್ರದ ಶೂಟಿಂಗ್ ರದ್ದು - Mahanayaka

ನಟಿ ಶುಭಾ ಪೂಂಜಾ ಜೊತೆಗೆ ಯುವಕರಿಂದ ಅಸಭ್ಯ ವರ್ತನೆ: ಕೊರಗಜ್ಜ ಚಿತ್ರದ ಶೂಟಿಂಗ್ ರದ್ದು

koragajja
28/10/2023


Provided by

ಚಿಕ್ಕಮಗಳೂರು: ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೊರಗಜ್ಜ ಚಿತ್ರದ ಹಾಡಿನ ಶೂಟಿಂಗ್ ವೇಳೆ ಯುವಕರ ತಂಡವೊಂದು ಅಸಭ್ಯ ವರ್ತನೆ ಮಾಡಿರುವ ಘಟನೆ ನಡೆದಿದ್ದು, ಘಟನೆಯ ಬಳಿಕ ಹಾಡಿನ ಚಿತ್ರೀಕರಣವನ್ನು ಚಿತ್ರ ತಂಡ ಕೈಬಿಟ್ಟಿದೆ.

ಕುದುರೆಮುಖದ  ಮೈದಾಡಿ ಗುಡ್ಡದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಪೂಂಜಾ ಅವರು ಶೂಟಿಂಗ್ ನಡೆಸುತ್ತಿದ್ದರು. ಈ ವೇಳೆ ನಟಿ ಶುಭಾ ಜೊತೆಗೆ ಯುವಕರ ತಂಡ ಅಸಭ್ಯವಾಗಿ ವರ್ತಿಸಿರುವ ಆರೋಪ ಕೂಡ ಕೇಳಿ ಬಂದಿದೆ.

ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯಾವ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ, ಕೃತ್ಯದಲ್ಲಿ ಬಿಜೆಪಿ ಪಕ್ಷದ ಸಾಗರ ಘಟಕದವರು ಎಂದು ಹೇಳಿಕೊಂಡ ಕೆಲವರು ಏಕಾಏಕಿ ಚಿತ್ರ ತಂಡದೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಚಿತ್ರ ತಂಡದವರೊಬ್ಬರು ತಿಳಿಸಿದ್ದಾರೆ.

ಹಾಡಿನ ಚಿತ್ರೀಕರಣಕ್ಕಾಗಿ  50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಲಕ್ಷಾಂತರ ರೂಪಾಯಿ ವ್ಯಯಿಸಿ ಸೆಟ್ ನಿರ್ಮಾಣ ಮಾಡಲಾಗಿತ್ತು.

ವಿಡಿಯೋ ನೋಡಿ:

 

ಇತ್ತೀಚಿನ ಸುದ್ದಿ