ರಾಗಿಣಿ-ಸಂಜನಾ ಸೆಲ್ ಗೆ ನನ್ನನ್ನು ಹಾಕಿ ಎಂದು ಹಠ ಹಿಡಿದ ಆದಂ ಪಾಷಾ - Mahanayaka
1:23 PM Wednesday 20 - August 2025

ರಾಗಿಣಿ-ಸಂಜನಾ ಸೆಲ್ ಗೆ ನನ್ನನ್ನು ಹಾಕಿ ಎಂದು ಹಠ ಹಿಡಿದ ಆದಂ ಪಾಷಾ

28/10/2020


Provided by

ಬೆಂಗಳೂರು:  ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಜೈಲಿನಲ್ಲಿರುವ ಆದಂ ಪಾಷಾ ಇದೀಗ ನನ್ನನ್ನು ಸಂಜನಾ ಮತ್ತು ರಾಗಿಣಿ ಸೆಲ್ ನಲ್ಲಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ.



ವಾರೆಂಟ್ ನಲ್ಲಿ ಆದಂ ಪಾಷಾ ಪುರುಷ ಎಂದು ಬರೆಯಲಾಗಿದೆ. ಆದರೆ ಆದಂ ಪಾಷಾ ತಾನು ಮಹಿಳೆ, ಹಾಗಾಗಿ ನನ್ನನ್ನು ರಾಗಿಣಿ, ಸಂಜನಾ ಸೆಲ್ ಗೆ ಬದಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.


ನಾನು ಇಲ್ಲಿದ್ದು ಏನು ಮಾಡಲಿ ರಾಗಿಣಿ ಸಂಜನಾ ಜೊತೆ ಸೆಲ್ ನಲ್ಲಿ ಹಾಕಿ ನನಗೆ ಮಾತನಾಡಲು ಅವರಿರುತ್ತಾರೆ ಎಂದು ಆದಂ ಪಾಷಾ ಹೇಳಿದ್ದಾನೆ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ.


ಇತ್ತೀಚಿನ ಸುದ್ದಿ