ಸಭೆಯಲ್ಲಿ ಅಧಿಕಾರಿಯ ಹೆಂಡ್ತಿಯ ಸೀರೆಯ ಬಗ್ಗೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ! - Mahanayaka
10:21 AM Monday 15 - December 2025

ಸಭೆಯಲ್ಲಿ ಅಧಿಕಾರಿಯ ಹೆಂಡ್ತಿಯ ಸೀರೆಯ ಬಗ್ಗೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ!

07/01/2021

ತುಮಕೂರು:  ಸಾರ್ವಜನಿಕ ಪ್ರದೇಶದಲ್ಲಿ ಅವಾಚ್ಯ ಶಬ್ದ ಪ್ರಯೋಗಕ್ಕೆ ಸಂಬಂಧಿಸಿದಂತೆ  ಕಾನೂನು ಸಚಿವ ಮಾಧುಸ್ವಾಮಿ ಇದೀಗ ಮತ್ತೊಮ್ಮೆ ಇಂತಹದ್ದೇ ಪದ ಪ್ರಯೋಗ ಮಾಡಿದ್ದು, ಕಾನೂನು ಸಚಿವರು ಕಾನೂನು ಅರಿತುಕೊಳ್ಳದೇ, ಬೇಕಾ ಬಿಟ್ಟಿ ನಾಲಿಗೆ ಹರಿಬಿಟ್ಟಿದ್ದಾರೆ.

ತುಮಕೂರು ಕೆಡಿಪಿ ಪಂಚಾಯತ್ ಸಭೆಯಲ್ಲಿ ಎಇಇ ವಿರುದ್ಧ ಮಾಧುಸ್ವಾಮಿ ಗರಂ ಆಗಿದ್ದಾರೆ.  ಜಿಲ್ಲಾ ಪಂಚಾಯತ್  ಎಂಜಿನಿಯರಿಂಗ್ ವಿಭಾಗದಲ್ಲಿ  ಕೆಲಸಗಳು ಆಗಿಲ್ಲ. ನಾನು ಸೂಚನೆ ನೀಡಿ ಎಷ್ಟೋ ದಿನಗಳಾಗಿವೆ ಎಂದು ಆಕ್ರೋಶಗೊಂಡ ಸಚಿವರು, ಎಇಇ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ.

ಏಕವಚನದಲ್ಲಿ ಮಾತನಾಡಿದ ಅವರು, “ಜಾಡಿಸಿ ಒದ್ದರೆ, ನೀನು ಎಲ್ಲಿಗೆ ಹೋಗಿ ಬೀಳುತ್ತಿ ನೀನು ಗೊತ್ತಾ? ರಾಸ್ಕಲ್ ಕತ್ತೆ ಕಾಯೋಕೆ ಹೇಳಿದ್ನಾ ಇಲ್ಲಿ?  ನಿನ್ನ ಹೆಂಡ್ತಿಸೀರೆ ತೊಳೆಯೋಕೆ ಹೋಗೋದು ನೀನು? ರಾಸ್ಕೆಲ್  ರೆಸಲ್ಯೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ ಎಂದು ಕೂಗಾಡಿದ್ದಾರೆ.

ಈ ಸಭೆಯಲ್ಲಿ ಸಂಸದ ಬಸವರಾಜ್, ಜಿ.ಪಂ. ಅಧ್ಯಕ್ಷ ಲತಾ ರವಿಕುಮಾರ್, ಡಿಸಿ ಡಾ.ರಾಕೇಶ್ ಕುಮಾರ್, ಜಿ.ಪಂ. ಸಿಇಒ ಶುಭಕಲ್ಯಾಣ್  ಮತ್ತಿತರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ