ಸಮಾಜಸೇವಕ, ನಟ ಸೋನುಸೂದ್ ವಿರುದ್ಧ ದೂರು ದಾಖಲು! - Mahanayaka

ಸಮಾಜಸೇವಕ, ನಟ ಸೋನುಸೂದ್ ವಿರುದ್ಧ ದೂರು ದಾಖಲು!

07/01/2021

ಮಹಾರಾಷ್ಟ್ರ:  ಲಾಕ್ ಡೌನ್ ಸಂದರ್ಭದಲ್ಲಿ ಲಕ್ಷಾಂತರ ಕಾರ್ಮಿಕರಿಗೆ ನೆರವಾಗಿದ್ದ, ನಟ ಸೋನುಸೂದ್ ಅವರ ಮೇಲೆ  ದೂರು ದಾಖಲಾಗಿದ್ದು, ವಸತಿ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ  ಎಂದು ಆರೋಪಿಸಲಾಗಿದೆ.

ವಸತಿ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಲು  ಯಾವುದೇ ಅನುಮತಿ ಪಡೆದುಕೊಂಡಿಲ್ಲ ಎಂದು ಬಿಎಂಸಿ ಆರೋಪ  ಮಾಡಿದೆ.  ಎಬಿ ನಾಯರ್ ರಸ್ತೆಯ ಶಕ್ತಿ ಸಾಗರ್ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ. ಅದು ವಸತಿ ಕಟ್ಟಡವಾಗಿತ್ತು. ನಾಲ್ಕಂತಸ್ತಿನ ಕಟ್ಟಡವನ್ನು ಸೋನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಬಿಎಂಸಿ ಆರೋಪಿಸಿದೆ.

ಇನ್ನೂ ಈ ಸಂಬಂದ ಪ್ರತಿಕ್ರಿಯೆ ನೀಡಿರುವ  ಸೋನುಸೂದ್, ಈಗಾಗಲೇ ಬಿಎಂಸಿ ಅನುಮತಿ ಪಡೆದಿದ್ದೇನೆ. ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಅನುಮತಿಗಾಗಿ ಕಾಯ್ತಿದ್ದೇನೆಂದು ಸೋನು ಹೇಳಿದ್ದಾರೆ

ಬಿಎಂಸಿ ನೊಟೀಸ್ ವಿರುದ್ಧ ಸೋನು ಮುಂಬೈ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಯಾವುದೇ ಮಧ್ಯಂತರ ಪರಿಹಾರ ಸಿಕ್ಕಿರಲಿಲ್ಲ. ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ಸೋನುಗೆ ಮೂರು ವಾರಗಳ ಕಾಲಾವಕಾಶ ನೀಡಿತ್ತು. ಆದ್ರೆ ಅವಧಿ ಮುಗಿದಿದ್ದು ಬಿಎಂಸಿ ದೂರು ನೀಡಿದೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ