ಶ್ರದ್ಧಾಳನ್ನು ಕೊಲೆ ಮಾಡುವ ವೇಳೆ ಆದ ಗಾಯಕ್ಕೆ ಚಿಕಿತ್ಸೆ ಪಡೆದಿದ್ದ ಅಫ್ತಾಬ್ - Mahanayaka
7:25 AM Monday 15 - September 2025

ಶ್ರದ್ಧಾಳನ್ನು ಕೊಲೆ ಮಾಡುವ ವೇಳೆ ಆದ ಗಾಯಕ್ಕೆ ಚಿಕಿತ್ಸೆ ಪಡೆದಿದ್ದ ಅಫ್ತಾಬ್

aftab amin poonawalla
16/11/2022

ನವದೆಹಲಿ:  ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗ್ತಾ ಇದೆ. ಶ್ರದ್ಧಾಳನ್ನು ಕೊಲೆ ಮಾಡಿದ ವೇಳೆ ಅಫ್ತಾಬ್ ನ ಕೈಯಲ್ಲಿ ಸಣ್ಣ ಗಾಯವಾಗಿತ್ತು. ಈ ಗಾಯಕ್ಕೆ ಸ್ಥಳೀಯ ವೈದ್ಯರೊಬ್ಬರಿಂದ ಆರೋಪಿಯು ಚಿಕಿತ್ಸೆ ಪಡೆದಿದ್ದ ಅನ್ನೋ ವಿಚಾರ ಇದೀಗ ಬಯಲಾಗಿದೆ.


Provided by

ಶ್ರದ್ಧಾಳ ದೇಹವನ್ನು ಸುಮಾರು 35 ತುಂಡಾಗಿ ಕತ್ತರಿಸಿ ಫ್ರಿಡ್ಜ್ ‌ನಲ್ಲಿ ಇಟ್ಟು, ಬಳಿಕ ಮೆಹ್ರೌಲಿ ಕಾಡಿನ ವಿವಿಧೆಡೆ ಹೂತಿರುವುದಾಗಿ ವಿಚಾರಣೆ ವೇಳೆ ಅಫ್ತಾಬ್ ಒಪ್ಪಿಕೊಂಡಿದ್ದ. ಈ ಸಂಬಂಧ ದೆಹಲಿ ಪೊಲೀಸರು ಮಂಗಳವಾರಆರೋಪಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದರು.

ದೆಹಲಿ ಪೊಲೀಸರು ಅಫ್ತಾಬ್‌ ನನ್ನು ಬಂಧಿಸುತ್ತಿದ್ದಂತೆ ಆತ ಕೆಲಸ ಮಾಡುತ್ತಿದ್ದ ಕಂಪನಿಯು ಆತನನ್ನು ಕೆಲಸದಿಂದ ವಜಾಗೊಳಿಸಿದೆ.

ಕಳೆದ 3 ತಿಂಗಳಿನಿಂದ ಆತ ಗುರುಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಯ ಮರುದಿನದಿಂದ ಆತ ಕಾಲ್‌ ಸೆಂಟರ್‌ ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದ ಎನ್ನುವ ಅಂಶಗಳು ತನಿಖೆಯಿಂದ ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ