ಪುತ್ರಿಯ ತುಟಿಗೆ ಮುತ್ತಿಟ್ಟ ಫೋಟೋ ಹಂಚಿಕೊಂಡ ಐಶ್ವರ್ಯಾ: ಸಂಪ್ರದಾಯವಾದಿ ನೆಟ್ಟಿಗರು ಗರಂ!
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಾ ಬಚ್ಚನ್ ಇಂದು ಹುಟ್ಟು ಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದಾಳೆ. ಇದೇ ಸಂದರ್ಭದಲ್ಲಿ ನಟಿ ಐಶ್ವರ್ಯ ರೈ ತಮ್ಮ ಪುತ್ರಿಯ ತುಟಿಗೆ ಮುತ್ತಿಟ್ಟ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ಸಾಕಷ್ಟು ಸಂಖ್ಯೆಯ ನೆಟ್ಟಿಗರು ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇತ್ತ ಕೆಲವು ಸಂಪ್ರದಾಯವಾದಿಗಳು, ಈ ರೀತಿ ಫೋಟೋ ತೆಗೆಸಿಕೊಂಡಿರುವುದು ತಪ್ಪು, ಮಗಳಿಗೆ ಲಿಪ್ಸ್’ಗೆ ಕಿಸ್ ಮಾಡುವುದು ಸರಿಯಲ್ಲ ಎಂಬೆಲ್ಲ ವಾದಗಳನ್ನು ತಂದಿಟ್ಟಿದ್ದಾರೆ.
11ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಆರಾಧ್ಯಾಗೆ ಮುತ್ತಿಟ್ಟಿರುವ ಫೋಟೋ ಹಂಚಿಕೊಂಡಿರುವ ಐಶ್ವರ್ಯಾ ‘ನನ್ನ ಪ್ರೀತಿ.. ನನ್ನ ಜೀವನ.. ನನ್ನ ಆರಾಧ್ಯ.. ಐ ಲವ್ ಯೂ’ ಎಂದು ಬರೆದುಕೊಂಡಿದ್ದಾರೆ.
ಐಶ್ವರ್ಯಾ ಅವರು ಹಂಚಿಕೊಂಡಿರುವ ಫೋಟೋಗೆ ಕೆಲವು ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ತಾಯಿ ತುಟಿಗೆ ಮುತ್ತುಕೊಡುವುದು ಸರಿಯಲ್ಲ ಎಂಬಂತೆ ತಮ್ಮದೇ ಆಲೋಚನೆಗಳನ್ನು ಕಮೆಂಟ್ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka