ಶಾಸ್ತ್ರಿ ಚಿತ್ರ ರೀ ರಿಲೀಸ್ ಬೆನ್ನಲ್ಲೇ ಯಶ್ ನಟನೆಯ ರಾಜಾಹುಲಿ ರೀ ರಿಲೀಸ್: ಯಾವಾಗ? - Mahanayaka

ಶಾಸ್ತ್ರಿ ಚಿತ್ರ ರೀ ರಿಲೀಸ್ ಬೆನ್ನಲ್ಲೇ ಯಶ್ ನಟನೆಯ ರಾಜಾಹುಲಿ ರೀ ರಿಲೀಸ್: ಯಾವಾಗ?

rajahuli
15/07/2024

ದರ್ಶನ್ ನಟನೆಯ ಶಾಸ್ತ್ರಿ ಚಿತ್ರ ರೀ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ರಾಕಿಂಗ್ ಸ್ಟಾರ್ ಯಶ್ ನಟನೆಯ ಅಭಿನಯದ ರಾಜಾಹುಲಿ ಸಿನಿಮಾ ರೀ ರಿಲೀಸ್ ಆಗ್ತಿದೆ.

ರಾಜಾಹುಲಿ ಚಿತ್ರ ನಟ ಯಶ್ ಅವರ ಕೆರಿಯರ್‌‌ ನ ಬೂಸ್ಟ್‌ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ.  ಈ ಸಿನಿಮಾದಲ್ಲಿ ಯಶ್‌, ಮೇಘನಾ ರಾಜ್‌, ಚರಣ್‌ ರಾಜ್‌, ಚಿಕ್ಕಣ್ಣ, ವಸಿಷ್ಠ ಸಿಂಹ ಸೇರಿ ಸಾಕಷ್ಟು ದೊಡ್ಡ ತಾರಾ ಬಳಗವೇ ನಟಿಸಿತ್ತು.  ಅಲ್ಲದೇ ಈ ಚಿತ್ರ ಸೂಪರ್ ಹಿಟ್ ಆಗಿತ್ತು.

ಗುರು ದೇಶಪಾಂಡೆ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಕೆ. ಮಂಜು ನಿರ್ಮಿಸಿದ್ದರು. ಇದೇ ತಿಂಗಳ 26ರಂದು ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ಮರು ಬಿಡುಗಡೆ ಆಗಲಿದೆ. ಭೂಮಿ ಫಿಲಂಸ್‌ ಈ ಚಿತ್ರವನ್ನು ವಿತರಣೆ ಮಾಡಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ