ಉದ್ಯಮಿಗಳ ಲಾಭಕ್ಕಾಗಿ 'ಅಗ್ನಿವೀರ್ ಯೋಜನೆ' ಜಾರಿ: ರಾಹುಲ್ ಗಾಂಧಿ ಆರೋಪ - Mahanayaka

ಉದ್ಯಮಿಗಳ ಲಾಭಕ್ಕಾಗಿ ‘ಅಗ್ನಿವೀರ್ ಯೋಜನೆ’ ಜಾರಿ: ರಾಹುಲ್ ಗಾಂಧಿ ಆರೋಪ

16/02/2024


Provided by

ಸೈನಿಕರಿಗೆ ನೀಡುವ ಗೌರವಧನದ ಬದಲು ಉದ್ಯಮಿಗಳ ಲಾಭಕ್ಕಾಗಿ ರಕ್ಷಣಾ ಬಜೆಟ್‌ ಅನ್ನು ಖರ್ಚು ಮಾಡಲು ಮೋದಿ ಸರ್ಕಾರ ಅಗ್ನಿವೀರ್‌ ಯೋಜನೆಯನ್ನು ತಂದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು.

ಬಿಹಾರದ ಕೈಮೂರ್ ಜಿಲ್ಲೆಯ ಮೊಹಾನಿಯಾದಲ್ಲಿ ಮಾತನಾಡಿದ ಅವರು, ಅಗ್ನಿವೀರ್‌ನಲ್ಲಿರುವ ಸೈನಿಕರಿಗೆ ಸಾಮಾನ್ಯ ಸೇನಾ ಸೈನಿಕರಿಗೆ ನೀಡುವ ಸಮಾನ ಸಂಬಳ ಹಾಗೂ ಪಿಂಚಣಿಯನ್ನು ನೀಡುತ್ತಿಲ್ಲ. ಇದರ ಜೊತೆಗೆ ಕ್ಯಾಂಟೀನ್‌ಗೂ ಪ್ರವೇಶವಿಲ್ಲ.

ಮೋದಿ ಸರ್ಕಾರವು ರಕ್ಷಣಾ ಬಜೆಟ್‌ ಅನ್ನು ಸೈನಿಕರ ಸಂಬಳ ಹಾಗೂ ಇತರ ಸೌಲಭ್ಯಗಳಿಗಾಗಿ ಖರ್ಚು ಮಾಡಲು ಬಯಸುವುದಿಲ್ಲ. ಆ ಹಣವನ್ನು ಕೇವಲ ವ್ಯಾಪಾರ ಸಂಸ್ಥೆಯ ಲಾಭಕ್ಕಾಗಿ ಖರ್ಚು ಮಾಡಲು ಬಯಸುತ್ತದೆ ಎಂದು ಕಿಡಿಕಾರಿದರು.

ಕೃಷಿಕರು ತಮ್ಮ ಬೆಳೆಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯುತ್ತಿಲ್ಲ. 2024ರ ನಂತರ ಇಂಡಿಯಾ ಮೈತ್ರಿ ಒಕ್ಕೂಟವು ಅಧಿಕಾರಕ್ಕೆ ಬಂದರೇ ದೇಶದ ರೈತರ ದೀರ್ಘಾವಧಿ ಬೇಡಿಕೆಗಳನ್ನು ಈಡೇರಿಸುತ್ತೇವೆ. ಜೊತೆಗೆ ಬೆಳೆಗಳ ಕನಿಷ್ಠ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಪಡಿಸುತ್ತೇವೆ. ಜೊತೆಗೆ ಕೃಷಿಕರ ಹಿತಾಸಕ್ತಿ ಹಾಗೂ ಭವಿಷ್ಯಕ್ಕೆ ಅನುಕೂಲವಾಗುವ ಕ್ರಮವನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.

ಇತ್ತೀಚಿನ ಸುದ್ದಿ