ಜಯಪ್ರಕಾಶ್ ನಾರಾಯಣ್ ರ ಪ್ರತಿಮೆಗೆ ಮಾಲಾರ್ಪಣೆಗೆ ತಡೆ: ಮೋದಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸಾತಿಗೆ ನಿತೀಶ್ ರಿಗೆ ಅಖಿಲೇಶ್ ಮನವಿ - Mahanayaka

ಜಯಪ್ರಕಾಶ್ ನಾರಾಯಣ್ ರ ಪ್ರತಿಮೆಗೆ ಮಾಲಾರ್ಪಣೆಗೆ ತಡೆ: ಮೋದಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸಾತಿಗೆ ನಿತೀಶ್ ರಿಗೆ ಅಖಿಲೇಶ್ ಮನವಿ

11/10/2024

ಜಯಪ್ರಕಾಶ್ ನಾರಾಯಣ್ ರ ಪ್ರತಿಮೆಗೆ ಮಾಲಾರ್ಪಣೆ ಮಾಡದಂತೆ ಸಮಾಜವಾದಿ ಪಕ್ಷದ ನಾಯಕರನ್ನು ತಡೆದ ಕಾರಣ, ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಬೆಂಬಲ ಹಿಂಪಡೆಯುವಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ ಜನತಾ ದಳ ಯುನೈಟೆಡ್ ನಾಯಕ ನಿತೀಶ್ ಕುಮಾರ್ ರನ್ನು ಒತ್ತಾಯಿಸಿದ್ದಾರೆ.

ಗುರುವಾರ ಲಕ್ನೋದಲ್ಲಿ ಪ್ರತಿಮೆಯ ಬಳಿ ಹೋಗದಂತೆ ಅಖಿಲೇಶ್ ಯಾದವರನ್ನ ಅಧಿಕಾರಿಗಳು ತಡೆದಿದ್ದಕ್ಕೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ನಿತೀಶ್ ಕುಮಾರ್ ರ ಜೆಡಿಯು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಭಾಗವಾಗಿದೆ. “ಹಲವು ಸಮಾಜವಾದಿ ಜನರು ಸರ್ಕಾರದಲ್ಲಿದ್ದಾರೆ ಮತ್ತು ಸರ್ಕಾರವನ್ನು ಮುಂದುವರೆಸಲು ಸಹಾಯ ಮಾಡುತ್ತಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ಜೈ ಪ್ರಕಾಶ್ ನಾರಾಯಣ್ ಚಳುವಳಿಯಿಂದ ಹೊರಹೊಮ್ಮಿದರು, ಇದು ಸಮಾಜವಾದಿಗೆ ಅವಕಾಶ ನೀಡದ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳಲು ನಿತೀಶ್ ಕುಮಾರ್ ರಿಗೆ ಅವಕಾಶವಾಗಿದೆ. ಜಯಪ್ರಕಾಶ ನಾರಾಯಣ ರ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ,” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ