ರಿಯಲ್ ಕಾದಾಟಕ್ಕೆ ಅಕ್ಷಯ್ ಕುಮಾರ್ ನ್ನು ಆಹ್ವಾನಿಸಿದ ಅಂಡರ್ ಟೇಕರ್ | ಅಕ್ಷಯ್ ಕೊಟ್ಟ ಉತ್ತರ ಏನು ಗೊತ್ತಾ? - Mahanayaka
8:07 AM Thursday 13 - February 2025

ರಿಯಲ್ ಕಾದಾಟಕ್ಕೆ ಅಕ್ಷಯ್ ಕುಮಾರ್ ನ್ನು ಆಹ್ವಾನಿಸಿದ ಅಂಡರ್ ಟೇಕರ್ | ಅಕ್ಷಯ್ ಕೊಟ್ಟ ಉತ್ತರ ಏನು ಗೊತ್ತಾ?

akshay kumar undertaker
19/06/2021

ಮುಂಬೈ:  ಡಬ್ಲ್ಯು ಡಬ್ಲ್ಯು ಇ ಸೂಪರ್ ಸ್ಟಾರ್  ಅಂಡರ್ ಟೇಕರ್ ಅವರು, ನಟ ಅಕ್ಷಯ್ ಕುಮಾರ್ ಅವರಿಗೆ ನೇರ ಕಾದಾಟಕ್ಕೆ ಬರುವಂತೆ ಆಹ್ವಾನಿಸಿದ್ದು, ಇದಕ್ಕೆ ಅಕ್ಷಯ್ ಕುಮಾರ್ ಅವರು ನೀಡಿದ ಉತ್ತರಕ್ಕೆ ನೆಟ್ಟಿಗರು ನಕ್ಕು ಸುಸ್ತಾಗಿದ್ದಾರೆ.

ಅಕ್ಷಯ್ ಕುಮಾರ್ ಅವರು ನಟಿಸಿದ್ದ ಬಾಲಿವುಡ್ ನ ಖಿಲಾಡಿಯೋಂ ಕಾ ಕಿಲಾಡಿ ಸಿನಿಮಾದಲ್ಲಿ ಅಂಡರ್ ಟೇಕರ್ ಹಾಗೂ ಅಕ್ಷಯ್ ಕುಮಾರ್ ಅವರು ಕಾದಾಡುವ ದೃಶ್ಯವಿತ್ತು. ಈ ಚಿತ್ರ ತೆರೆಗೆ ಬಂದು 25 ವರ್ಷಗಳಾಗಿವೆ. ಇದೇ ಸಂದರ್ಭದಲ್ಲಿ, ಅಂಡರ್ ಟೇಕರ್ ಅವರು, ರಿಯಲ್ ಕಾದಾಟಕ್ಕೆ ಬರುವಂತೆ ಅಕ್ಷಯ್ ಕುಮಾರ್ ಗೆ ಆಹ್ವಾನ ನೀಡಿದ್ದಾರೆ.

ಅಂಡರ್ ಟೇಕರ್ ಅವರ ಟ್ವೀಟ್ ಗೆ ಉತ್ತರಿಸಿದ ಅಕ್ಷಯ್ ಕುಮಾರ್, “ನಾನು ನನ್ನ ಇನ್ಸೂರೆನ್ಸ್ ಚೆಕ್ ಮಾಡಿ ಬರುತ್ತೇನೆ ಬ್ರೋ…” ಎಂದು ಹಾಸ್ಯ ಚಟಾಕಿ ಹರಿಸಿದ್ದಾರೆ.

ಇತ್ತೀಚಿನ ಸುದ್ದಿ