ಇಸ್ರೇಲ್ ವೈಮಾನಿಕ ದಾಳಿ: ಅಲ್ ಕುದ್ಸ್ ಬ್ರಿಗೇಡ್ ನ ಸೇನಾ ವಕ್ತಾರ ದುರ್ಮರಣ

ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ ನ ಸಶಸ್ತ್ರ ವಿಭಾಗವಾದ ಅಲ್ ಕುದ್ಸ್ ಬ್ರಿಗೇಡ್ ನ ಸೇನಾ ವಕ್ತಾರರಾಗಿದ್ದ ಅಬೂ ಹಂಝ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರ ಜೊತೆಗೆ ಅವರ ಕುಟುಂಬವೂ ಸಾವಿಗೀಡಾಗಿದೆ. ಅಬೂ ಹಂಝ ಎಂಬ ಹೆಸರಲ್ಲಿ ಗುರುತಿಸಿಕೊಂಡಿರುವ ಅಬು ಸೈಫ್ ಅಲ್ ಕುದ್ಸ್ ಬ್ರಿಗೇಡ್ ನ ಮಟ್ಟಿಗೆ ಬಹಳ ದೊಡ್ಡ ಶಕ್ತಿಯಾಗಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಅಲ್ ಕುದ್ಸ್ ಸಶಸ್ತ್ರ ಹೋರಾಟ ಸಂಘವು ದೃಢೀಕರಣ ಮಾಡಿದೆ. ಅಬೂ ಹಂಝ ಮತ್ತು ಅವರ ಕುಟುಂಬ ಹಾಗೂ ಅವರ ಸಹೋದರನ ಕುಟುಂಬವನ್ನು ಗುರಿ ಮಾಡಿ ಇಸ್ರೇಲ್ ಮಾಡಿದ ವೈಮಾನಿಕ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದಾರೆ.
ಆದರೆ ಇದು ನಮ್ಮ ಹೋರಾಟದ ಕಿಚ್ಚನ್ನು ಕಿಂಚಿತ್ತೂ ಸಡಿಲಗೊಳಿಸದು. ಇಂತಹ ವಂಚನೆಯ ಹತ್ಯೆಗೆ ನಾವೆಂದು ಹಿಂಜರಿಯಲಾರೆವು ಎಂದು ಸ್ಪಷ್ಟೀಕರಣದಲ್ಲಿ ತಿಳಿಸಲಾಗಿದೆ.
ಮಧ್ಯ ಗಾಝಾದ ನುಸೈರಾತ್ ನಿರಾಶ್ರಿತ ಶಿಬಿರದಲ್ಲಿ 25 ವರ್ಷದ ಅಬು ಹಂಝ ಅವರ ಹತ್ಯೆ ನಡೆದಿದೆ. ಬಸ್ ಡ್ರೈವರ್ ಆಗಿದ್ದ ಯುವಕ ತನ್ನ ವಾಕ್ಚಾತುರ್ಯ,ಸೇನಾ ಮತ್ತು ತಾಂತ್ರಿಕ ನೈಪುಣ್ಯತೆಯ ಹಿನ್ನೆಲೆಯಲ್ಲಿ ಸಶಸ್ತ್ರ ದಳವನ್ನ ಸೇರಿದ್ದರು.
ಹಮಾಸ್ ನ ಸಶಸ್ತ್ರ ವಿಭಾಗವಾದ ಅಲ್ ಕಸ್ಸಾಮ್ ಬ್ರಿಗೇಡ್ ನ ವಕ್ತಾರರಾಗಿ ಅಬು ಉಭೈದ ಒಂದು ಕಡೆ ಇದ್ದರೆ ಇನ್ನೊಂದು ಕಡೆ ಫೆಲಿಸ್ತೀನ್ ನ ಇನ್ನೊಂದು ಪ್ರಮುಖ ಪ್ರತಿರೋಧ ತಂಡವಾದ ಅಲ್ ಕುದ್ಸ್ ನ ಉತ್ತರರಾಗಿ ಇವರೂ ಅದೇ ರೂಪದಲ್ಲಿ ಪ್ರಸಿದ್ಧಿಯಲ್ಲಿದ್ದರು.
ತನ್ನ ಹೋರಾಟ ರಂಗದಲ್ಲಿ ಫೆಲ ಸ್ತೀನಿಯರಿಗೆ ಈ ಅಬುಹಂಝ ಪರಿಚಯ ಇರಲಿಲ್ಲ. ಅವರು ಅಪರಿಚಿತರಾಗಿ ಉಳಿದಿದ್ದರು. ಇಸ್ರೇಲ್ ನ ವಾದದ ಪ್ರಕಾರ ಇವರು ಬಂಕರ್ ನಲ್ಲಿ ವಾಸಿಸುತ್ತಿರಲಿಲ್ಲ. ಇವರ ಜೊತೆಗೆ ಇವರ ಪತ್ನಿ ಶೈಮಾ ಕೂಡ ಹುತಾತ್ಮರಾಗಿದ್ದಾರೆ ಈ ಹುತಾತ್ಮ ತೆಗಿಂತ ಒಂದು ವಾರ ಮೊದಲಷ್ಟೇ ಇವರಿಬ್ಬರೂ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಈ ದಾಳಿಯಲ್ಲಿ ಹಂಝ ಅವರ ತಂದೆ ತಾಯಿ ಮತ್ತು ಸಹೋದರನ ಕುಟುಂಬವೂ ಮೃತಪಟ್ಟಿದೆ. ಆಕ್ರಮಿತ ಪಶ್ಚಿಮ ದಂಡೆ ಗಾಝಾ ಮತ್ತು ಈಗಿನ ಇಸ್ರೇಲ್ ನ ಕೆಲವು ಪ್ರದೇಶಗಳೂ ಸೇರಿದಂತೆ ಫೆಲಸ್ತೀನ್ ರಾಷ್ಟ್ರ ಸ್ಥಾಪಿಸುವ ಉದ್ದೇಶದೊಂದಿಗೆ 1981ರಲ್ಲಿ ಈಜಿಪ್ಟಿನ ಫೆಲೆಸ್ತೀನಿ ವಿದ್ಯಾರ್ಥಿಗಳು ಇಸ್ಲಾಮಿಕ್ ಜಿಹಾದ್ ತಂಡವನ್ನ ಸ್ಥಾಪಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj