ದಕ್ಷಿಣ ಭಾರತದ ಈ ಮೂರು ಚಿತ್ರಗಳ ಮೇಲೆ ಹಿಂದಿವಾಲಗಳ ಕಣ್ಣು | ಹಿಂದಿ ನೆಲದಲ್ಲಿ ಮಾಸ್ಟರ್ ವಿಜಯ್, ಕೆಜಿಎಫ್, ವಲಿಮೈ ಆಟ - Mahanayaka
2:34 AM Thursday 30 - November 2023

ದಕ್ಷಿಣ ಭಾರತದ ಈ ಮೂರು ಚಿತ್ರಗಳ ಮೇಲೆ ಹಿಂದಿವಾಲಗಳ ಕಣ್ಣು | ಹಿಂದಿ ನೆಲದಲ್ಲಿ ಮಾಸ್ಟರ್ ವಿಜಯ್, ಕೆಜಿಎಫ್, ವಲಿಮೈ ಆಟ

28/12/2020

ಸಲ್ಮಾನ್ ಖಾನ್, ಶಾರೂಕ್ ಖಾನ್, ಹೃತಿಕ್ ರೋಷನ್ ಹೀಗೆ ಬಾಲಿವುಡ್ ನಟರ ಆರಾಧನೆಯಲ್ಲಿಯೇ ಕಳೆದ ಭಾರತೀಯ ಚಿತ್ರರಂಗ ಇದೀಗ ಹಿಂದಿವಾಲಗಳ ಚಿತ್ರಗಳಿಗೆ ದಕ್ಷಿಣ ಭಾರತದ ಸೆಡ್ಡು ಹೊಡೆದಿದ್ದು, ಉತ್ತರ ಭಾರತೀಯರು ಕೆಜಿಎಫ್ ಬಳಿಕ ಇದೀಗ ದಕ್ಷಿಣ ಭಾರತದ ಸಿನಿಮಾಗಳಿಗಾಗಿ ಕಾಯುತ್ತಿದ್ದಾರೆ.

ಹೌದು…! ಕೊವಿಡ್ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಇನ್ನೂ ಚೇತರಿಸಿಕೊಂಡಿಲ್ಲ. ಹಲವಾರು ಚಿತ್ರಮಂದಿರಗಳನ್ನು ಲಾಕ್ ಡೌನ್ ಬಳಿಕ ಮಾಲಿಕರು  ಮಾರಾಟ ಮಾಡಿದ್ದು, ಚಿತ್ರಮಂದಿರಗಳು ನೆಲಸಮವಾಗಿವೆ. ಈ ಎಲ್ಲ ಸಂಕಷ್ಟದ ನಡುವೆಯೇ ದಕ್ಷಿಣ ಭಾರತದಲ್ಲಿ  ತಮಿಳು ಜನಪ್ರಿಯ ನಟ  ಇಳೆಯದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಅವರ ಮಾಸ್ಟರ್ ಚಿತ್ರ ಎದ್ದು ನಿಂತಿದೆ. ಈ ಚಿತ್ರ ಹಿಂದಿಗೆ ಡಬ್ ಆಗಲಿದ್ದು, ಈ ಚಿತ್ರ ಇದೀಗ ಪ್ರಧಾನ ಕೇಂದ್ರವಾಗಿದೆ. ಇನ್ನೂ ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಅವರ ಕೆಜಿಎಫ್ ಭಾಗ 2 ಚಿತ್ರ ಕೂಡ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ತಮಿಳಿನ ದಳದಳಪತಿ ಅಜಿತ್ ಅವರ ವಲಿಮೈ  ಚಿತ್ರಕೂಡ ಬಿಡುಗಡೆಯಾಗಲಿದ್ದು ದಕ್ಷಿಣ ಭಾರತದ ಈ ಮೂರು ಚಿತ್ರಗಳಿಗಾಗಿ ಹಿಂದಿವಾಲರು ಕಾಯುತ್ತಿದ್ದಾರೆ.

ಹಿಟ್ ಚಿತ್ರಗಳನ್ನು ನೀಡುತ್ತಿರುವ ವಿಜಯ್ ಅವರ ಮಾಸ್ಟರ್ ಚಿತ್ರದತ್ತ ಎಲ್ಲರ ದೃಷ್ಟಿ ನೆಟ್ಟಿದೆ.  ಚಿತ್ರದ ಪೋಸ್ಟರ್ ಕೂಡ ಈ ಚಿತ್ರ ಅಸಾಮಾನ್ಯ ದಾಖಲೆ ಬರೆಯಲಿದೆ ಎನ್ನುವುದನ್ನು ಸಾರಿ ಹೇಳಿದೆ. ಇನ್ನು ಕೆಜಿಎಫ್ 2ನಲ್ಲಿ ಬೃಹತ್ ಪಾತ್ರಗಳ ಅಬ್ಬರ ಹೇಗಿರಲಿದೆ ಎಂಬ ಬಗ್ಗೆಯೂ ಕುತೂಹಲ ಹೆಚ್ಚಿದೆ. ಅಂತೂ ಇಂತೂ ಉತ್ತರ ಭಾರತದ ಚಿತ್ರಗಳಿಗೆ ದಕ್ಷಿಣ ಭಾರತದ ಚಿತ್ರಗಳು ಸೆಡ್ಡು ಹೊಡೆಯುತ್ತಿದ್ದು, ಹಿಂದಿವಾಲಗಳ ನೆಲದಲ್ಲಿ ದಕ್ಷಿಣ ಭಾರತದ ಚಿತ್ರಗಳು ಅಬ್ಬರಿಸಲು ಸಿದ್ಧವಾಗಿವೆ.

ಇತ್ತೀಚಿನ ಸುದ್ದಿ