“ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ” | ದೆಹಲಿಯಲ್ಲಾದ ಅನುಭವ ಹೇಳಿದ ವೃಕ್ಷಮಾತೆ ತುಳಸಿ ಗೌಡ - Mahanayaka

“ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ” | ದೆಹಲಿಯಲ್ಲಾದ ಅನುಭವ ಹೇಳಿದ ವೃಕ್ಷಮಾತೆ ತುಳಸಿ ಗೌಡ

tulasigowda
09/11/2021


Provided by

ಅಂಕೋಲಾ:  ವೃಕ್ಷ ಮಾತೆ ಎಂದು ಹೆಸರಾಗಿರುವ  ಅಂಕೋಲಾದ ತುಳಸಿ ಗೌಡ ಅವರಿಗೆ  ಈ ಬಾರಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಪಡೆಯಲು ಹೋದ ಅವರಿಗೆ ಅಲ್ಲಿ ಆದ ಅನುಭವವನ್ನು ಅವರು ನಗುನಗುತ್ತಲೇ ಹಂಚಿಕೊಂಡಿದ್ದಾರೆ.

ಅಲ್ಲಿ ಯಾರಿಗೂ ಕನ್ನಡವೇ ಬರುತ್ತಿರಲಿಲ್ಲ.  ನಾನು ಹೇಳಿದ್ದು ಅವರಿಗೆ ಗೊತ್ತಾಗ್ತಿರ್ಲಿಲ್ಲ, ಅವರು ಹೇಳಿದ್ದು ನನಗೆ ಅರ್ಥವಾಗ್ತಿರ್ಲಿಲ್ಲ. ಸುಮ್ಮನೆ ಎಲ್ಲದಕ್ಕೂ ಹೂ… ಹೂ… ಎಂದು ತಲೆ ಅಲ್ಲಾಡಿಸುತ್ತಿದ್ದರು ಎಂದು ಅವರು ನಗು ನಗುತ್ತಲೇ ಹೇಳಿದ್ದಾರೆ.

ಮೋದಿ ಹತ್ರನೂ ಮಾತನಾಡಿದೆ ಅವರಿಗೂ ಕನ್ನಡ ಬರುತ್ತಿರಲಿಲ್ಲ. ಸುಮ್ಮನೆ ಹೂ ಹೂ ಎಂದು ತಲೆ ಅಲ್ಲಾಡಿಸಿದರು ಎಂದು ಅವರು ನಗುತ್ತಲೇ ದೆಹಲಿಯಲ್ಲಾದ ಅನುಭವವನ್ನು  ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ