ಹೆಬ್ಬುಲಿ ಚಿತ್ರದ ನಾಯಕಿಯ ಖಾಸಗಿ ಚಿತ್ರ ಅಪ್ ಲೋಡ್ ಮಾಡಿದ ಮಾಜಿ ಗೆಳೆಯ! - Mahanayaka

ಹೆಬ್ಬುಲಿ ಚಿತ್ರದ ನಾಯಕಿಯ ಖಾಸಗಿ ಚಿತ್ರ ಅಪ್ ಲೋಡ್ ಮಾಡಿದ ಮಾಜಿ ಗೆಳೆಯ!

27/02/2021

ಸಿನಿಡೆಸ್ಕ್: ಬಹುಭಾಷಾ ನಟಿ, ಕಿಚ್ಚ ಸುದೀಪ್ ಅವರ ಹೆಬ್ಬುಲಿ ಚಿತ್ರದ ನಾಯಕಿ ನಟಿ ಅಮಲಾ ಪಾಲ್ ಅವರ ಖಾಸಗಿ ಚಿತ್ರಗಳನ್ನು ಅವರ ಮಾಜಿ ಗೆಳೆಯ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವುದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.


Provided by

ಜನಪ್ರಿಯ ನಟಿ ಅಮಲಾ ಪಾಲ್ ಅವರ ಮಾಜಿ ಗೆಳೆಯ ಗಾಯಕ ಭಾವಿನಿಂದರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮದ್ರಾಸ್ ಹೈಕೋರ್ಟ್  ಅನುಮತಿ ನೀಡಿದ್ದು, ತನ್ನ ವೈಯಕ್ತಿಕ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಾನ ಹಾನಿ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಗಾಯಕ ಭಾವಿನಿಂದರ್ ಸಿಂಗ್ ಜೊತೆಗೆ ತಾನು ಸ್ವಲ್ಪ ಸಮಯಗಳ ವರೆಗೆ ಸಂಬಂಧ ಹೊಂದಿದ್ದೆ. ಆದರೆ ಅವರು ನಿಶ್ಚಿತಾರ್ಥದ ಸಂದರ್ಭದಲ್ಲಿ ತೆಗೆದ ಹಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮವಾದ ಇನ್ಟ್ಸಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.  ಇದಲ್ಲದೇ ಇನ್ನೂ ಹಲವಾರು ಚಿತ್ರಗಳನ್ನು ಅಪ್ ಲೋಡ್ ಮಾಡುವುದಾಗಿ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದಲ್ಲದೇ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿ ಅವರು ತನ್ನಿಂದ ಹಣ ಸುಲಿಗೆ ಮಾಡಿದ್ದಾರೆ. ಹೀಗಾಗಿ ತಾನು ಅವರ ಸಂಬಂಧದಿಂದ ದೂರವಾಗಿದ್ದೆ. ಇದೀಗ ತನ್ನನ್ನು ಮದುವೆಯಾಗಿರುವುದಾಗಿ ಭಾವಿನಿಂದರ್ ಸಿಂಗ್ ಇನ್ಟ್ಸಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ ಎಂದು ಅಮಲಾ ಪಾಲ್ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ