ಇಸ್ರೇಲ್ ಗೆ ಬಂದಿಳಿದ ಶಸ್ತ್ರಾಸ್ತ್ರ ಹೊತ್ತ ಅಮೆರಿಕದ ವಿಮಾನ: ಹಮಾಸ್ ಗಳನ್ನ ಐಸಿಸ್ ಗಳಂತೆ ನಡೆಸಿಕೊಳ್ಳಬೇಕು: ಅಮೆರಿಕ - ಇಸ್ರೇಲ್ ಮಾತುಕತೆ - Mahanayaka
10:24 AM Saturday 23 - August 2025

ಇಸ್ರೇಲ್ ಗೆ ಬಂದಿಳಿದ ಶಸ್ತ್ರಾಸ್ತ್ರ ಹೊತ್ತ ಅಮೆರಿಕದ ವಿಮಾನ: ಹಮಾಸ್ ಗಳನ್ನ ಐಸಿಸ್ ಗಳಂತೆ ನಡೆಸಿಕೊಳ್ಳಬೇಕು: ಅಮೆರಿಕ — ಇಸ್ರೇಲ್ ಮಾತುಕತೆ

joe biden benjamin netanyahu
11/10/2023


Provided by

ಜೆರುಸಲೇಂ: ಹಮಾಸ್ ಬಂದುಕೋರರು ಇಸ್ರೇಲ್ ನ ದಕ್ಷಿಣ ಭಾಗದಲ್ಲಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಸದ್ಯ ಭಯಾನಕ ಯುದ್ಧ ನಡೆಯುತ್ತಿದೆ.  ಇದೇ ಸಂದರ್ಭದಲ್ಲಿ ಇಸ್ರೇಲ್ ಗೆ ಅಮೆರಿಕ ಶಸ್ತ್ರಾಸ್ತ್ರಗಳನ್ನ ಪೂರೈಕೆ ಮಾಡಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಗೆ ರಕ್ಷಣಾ ನೆರವು ರವಾನಿಸಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ. ಶಸ್ತ್ರಾಸ್ತ್ರಗಳನ್ನು ಹೊತ್ತ ಅಮೆರಿಕದ ಮೊದಲ ವಿಮಾನ ಮಂಗಳವಾರ ಸಂಜೆ ದಕ್ಷಿಣ ಇಸ್ರೇಲ್ ಗೆ ಬಂದಿಳಿದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.

ಅಮೆರಿಕ ಯಾವೆಲ್ಲ ಶಸ್ತ್ರಾಸ್ತ್ರಗಳನ್ನ ಒದಗಿಸಿದೆ ಎನ್ನುವ ಬಗ್ಗೆ ಇಸ್ರೇಲ್ ಮಾಹಿತಿ ನೀಡಿಲ್ಲ. ಆದ್ರೆ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವ ಭಾಗವಾಗಿ ಈ ಶಸ್ತ್ರಾಸ್ತ್ರಗಳನ್ನ ಪೂರೈಕೆ ಮಾಡಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಮಂಗಳವಾರ ಅಮೆರಿಕ ಅಧ್ಯಕ್ಷ ಬೈಡೆನ್ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಹಮಾಸ್ ಐಸಿಸ್ ಗಿಂತ ಕೆಟ್ಟದಾಗಿದ್ದು, ಹಮಾಸ್ ಬಂಡುಕೋರರನ್ನು ಐಸಿಸ್ ರೀತಿಯಲ್ಲೇ ನಡೆಸಿಕೊಳ್ಳಬೇಕು ಎಂದು ಬೈಡೆನ್ ಗೆ ಅವರು ತಿಳಿಸಿದ್ದಾರೆ. ಜೊತೆಗೆ ಅಮೆರಿಕಕ್ಕೆ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಹಮಾಸ್ ನಡೆಸಿದ ದಾಳಿಯಿಂದಾಗಿ ಇಸ್ರೇಲ್ ನಲ್ಲಿ 900ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಗಾಜಾದಲ್ಲಿ ಈವರೆಗೆ 687 ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗಾಜಾ ಪಟ್ಟಿಯ ಪೂರ್ವ ಗಡಿಯ ಬಳಿಯಲ್ಲಿ ಒಂದೇ ಸ್ಥಳದಲ್ಲಿ ಹಮಾಸ್ ಬಂದುಕೋರರು 100ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ