ಬಿಜೆಪಿ ಐಟಿಸೆಲ್ ಮುಖ್ಯಸ್ಥನ ವಿರುದ್ಧ ಲೈಂಗಿಕ ಆರೋಪ: ಸೂಕ್ತ ತನಿಖೆಗೆ ಆಗ್ರಹ - Mahanayaka

ಬಿಜೆಪಿ ಐಟಿಸೆಲ್ ಮುಖ್ಯಸ್ಥನ ವಿರುದ್ಧ ಲೈಂಗಿಕ ಆರೋಪ: ಸೂಕ್ತ ತನಿಖೆಗೆ ಆಗ್ರಹ

10/06/2024


Provided by

ಬಿಜೆಪಿ ಐಟಿಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ವಿರುದ್ಧ ಆರ್ ಎಸ್ ಎಸ್ ನ ಪ್ರಮುಖರು ಲೈಂಗಿಕ ಆರೋಪ ಹೊರಿಸಿದ ಘಟನೆ ನಡೆದಿದ್ದು ಬಿಜೆಪಿಯ ಒಳಗಡೆ ಎಲ್ಲವೂ ಸರಿ ಇಲ್ಲ ಎಂಬ ಮಾತಿಗೆ ಮತ್ತೆ ಪುಷ್ಟಿ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಅಮಿತ್ ಮಾಲವಿಯ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶಾಂತನು ಸಿಂಹ ಆರೋಪಿಸಿದ್ದಾರೆ.

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ಪಶ್ಚಿಮ ಬಂಗಾಳದಲ್ಲಿ ಉಳಿದುಕೊಂಡಿದ್ದ ವೇಳೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೆಂಬ ಆರೋಪ ಕೇಳಿ ಬಂದಿದೆ. ಆರೆಸ್ಸೆಸ್‌ ಸದಸ್ಯ ಸನಾತನು ಸಿನ್ಹಾ ತಮ್ಮ ಪೋಸ್ಟ್‌ನಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನಟೆ, ಮಾಳವಿಯಾ ವಿರುದ್ಧ ಬಿಜೆಪಿ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

“ಮಾಳವಿಯಾ ಪಂಚತಾರಾ ಹೋಟೆಲ್‌ಗಳಲ್ಲಿ ಮಾತ್ರವಲ್ಲ ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಗಳಲ್ಲೂ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಗಂಭೀರ ಆರೋಪ ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಕೇಳಿ ಬಂದಿದೆ. ಮಹಿಳೆಯರಿಗೆ ನ್ಯಾಯ ಸಿಗಬೇಕೆಂದು ಬಿಜೆಪಿಯನ್ನು ಆಗ್ರಹಿಸುತ್ತೇವೆ,” ಎಂದು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನಟೆ ಹೇಳಿದ್ದಾರೆ.
“ಮಾಳವೀಯ ಪ್ರಮುಖ ಮತ್ತು ಪ್ರಭಾವ ಬೀರಬಹುದಾದ ಹುದ್ದೆಯಲ್ಲಿರುವುದರಿಂದ ಅವರನ್ನು ತಕ್ಷಣ ಅವರ ಹುದ್ದೆಯಿಂದ ಕೈಬಿಡಬೇಕು,” ಎಂದೂ ಸುಪ್ರಿಯಾ ಆಗ್ರಹಿಸಿದ್ದಾರೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪ ಮಾಡಿದ್ದ ಆರೆಸ್ಸೆಸ್‌ ಸದಸ್ಯ ಸನಾತನು ಸಿನ್ಹಾ ವಿರುದ್ಧ ರೂ 10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ಮಾಳವಿಯಾ ಹೂಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ