ಜ್ಯೋತಿಷಿ ಆನಂದ್ ಗುರೂಜಿಯ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್! - Mahanayaka

ಜ್ಯೋತಿಷಿ ಆನಂದ್ ಗುರೂಜಿಯ ವಿಡಿಯೋ ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್!

02/02/2021

ಬೆಂಗಳೂರು: ಜ್ಯೋತಿಷಿಯ ವಿಡಿಯೋ ಇಟ್ಟುಕೊಂಡು 50 ಲಕ್ಷ ರೂಪಾಯಿ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿರುವ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನಂದ್ ಗುರೂಜಿ ಹಾಗೂ ಎಸ್.ಇ.ಸುದೀಂದ್ರ ಎಂಬವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ ವಿಡಿಯೋ ತುಣುಕನ್ನು ವೈರಲ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಾಯ್​ ಸೂರ್ಯ ಪತ್ರಿಕೆ ಪ್ರಧಾನ ಸಂಪಾದ  ಜಿ.ಕೆ. ವೇಲು ಅಲಿಯಾಸ್​ ಮಾರ್ಕೆಟ್​ ವೇಲು ಮತ್ತು ಯುವ ಕರ್ನಾಟಕ ಸಂಘದ ಅಧ್ಯಕ್ಷ ಎ.ಸಿ.ವೆಂಕಟೇಶ್​ ಎಂಬುವವರು ಸುಧೀಂದ್ರ ಹಾಗೂ ಆನಂದ್​ ಗುರೂಜಿ ಕುಟುಂಬದ ವೈಯಕ್ತಿಕ ವಿಷಯಗಳ ಕುರಿತಾಗಿ ಕೆಲವೊಂದು ಮಾಹಿತಿಗಳನ್ನು ಸಿದ್ಧಪಡಿಸಿದ್ದು,  ಈ ವಿಚಾರವನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಬಾರದಿದ್ದರೆ 50 ಲಕ್ಷ ರೂ. ನೀಡಬೇಕು. ಇಲ್ಲವಾದರೆ, ವಿಡಿಯೋವನ್ನು ಎಲ್ಲ ಚಾನೆಲ್ ಗಳಿಗೂ ನೀಡುವುದಾಗಿಯೂ, ವೈರಲ್ ಮಾಡುವುದಾಗಿಯೂ ಬೆದರಿಸಲಾಗಿದೆ ಎಂದು ದೂರಲಾಗಿದೆ.

ಈ ವಿಚಾರವಾಗಿ ಸತತ ಕರೆ ಮಾಡಿ ಡೀಲ್ ಮಾಡಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದ್ದು, ಜೀವ ಬೆದರಿಕೆ ಹಾಕಿ ಮಾನಸಿಕವಾಗಿ ಹಿಂಸೆ ನೀಡಲಾಗಿದೆ ಎದು ದೂರಿನಲ್ಲಿ ವಿವರಿಸಲಾಗಿದೆ.

ದೂರಿನ ಹಿನ್ನೆಲೆಯಲ್ಲಿ ಆರೋಪಿಗಳಾದ ಕೃಷ್ಣಮೂರ್ತಿ, ವೆಂಕಟೇಶ್ ಎಂಬವರನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದು, ಮತ್ತೋರ್ವ ಆರೋಪಿ ಮಾರ್ಕೆಟ್ ವೇಲುಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ