ಅನಂತ್‌ ಕುಮಾರ್‌ ಹೆಗಡೆ ಚಿವುಟುವುದು, ಬಿಜೆಪಿ ನಾಯಕರು ಸಂತೈಸಿಸುವುದು! - Mahanayaka

ಅನಂತ್‌ ಕುಮಾರ್‌ ಹೆಗಡೆ ಚಿವುಟುವುದು, ಬಿಜೆಪಿ ನಾಯಕರು ಸಂತೈಸಿಸುವುದು!

ananth kumar hegde
13/03/2024


Provided by

ಲೋಕಸಭಾ ಚುನಾವಣೆ ಬಂತೆಂದರೆ ಸಾಕು, ಅನಂತ್‌ ಕುಮಾರ್‌ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುವುದು ಸಾಮಾನ್ಯ ಎಂಬಂತಾಗಿದೆ. ಅನಂತ್‌ ಕುಮಾರ್‌ ಹೆಗಡೆ ಹೇಳಿಕೆ ನೀಡಿದಂತೆಲ್ಲ, ಬಿಜೆಪಿ ನಾಯಕರು ಈ ಹೇಳಿಕೆ ಸರಿಯಲ್ಲ, ನಮ್ಮ ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿ ಸುಮ್ಮನಾಗುತ್ತಾರೆ. ಬಿಜೆಪಿಯ ಈ ನಡೆ ಜನರಲ್ಲಿ ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿದೆ.

ಒಂದೆಡೆಯಿಂದ ಚಿವುಟುವುದು ಇನ್ನೊಂದೆಡೆ ಸಂತೈಸಿಸುವುದು ಬಿಜೆಪಿಯ ಒಳ ಅಜೆಂಡಾ ಎಂದು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಂವಿಧಾನವನ್ನೇ ಬದಲಿಸ್ತೇವೆ ಅಂತ ಹೇಳಿಕೆ ನೀಡಿದಾಗಲೂ ಅನಂತ್ ಕುಮಾರ್‌ ಹೆಗಡೆ ವಿರುದ್ಧ ಬಿಜೆಪಿ ಯಾವುದೇ ಕ್ರಮಕೈಗೊಂಡಿರಲಿಲ್ಲ, ಈ ಬಾರಿ ಸ್ವಲ್ಪ ಬದಲಾವಣೆ ಮಾಡಿಕೊಂಡು, ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಅಂತ ಹೇಳಿಕೆ ನೀಡಿದ್ದಾರೆ ಈ ಬಾರಿಯೂ ಇನ್ನೂ ಕ್ರಮಕೈಗೊಂಡಿಲ್ಲ. “ಮೌನಂ ಸಮ್ಮತಿ ಲಕ್ಷಣಂ” ಎನ್ನುವಂತೆ ಬಿಜೆಪಿ ನಡೆದುಕೊಳ್ಳುತ್ತಿದೆ. ಮೇಲ್ನೋಟಕ್ಕೆ ಸಂವಿಧಾನದ ಪರವಾಗಿರುವುದಾಗಿ ತೋರಿಸಿಕೊಳ್ಳುತ್ತಿದೆ, ಆದ್ರೆ ಬಿಜೆಪಿಯ ಒಳ ಅಜೆಂಡಾ ಸಂವಿಧಾನದ ವಿರುದ್ಧವಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ.

ಬಿಜೆಪಿ ಈ ಬಾರಿ ಅನಂತ್‌ ಕುಮಾರ್‌ ಹೆಗಡೆ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ರಾಜ್ಯದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಲಿದೆ, ಮಾತ್ರವಲ್ಲದೇ ಅನಂತ್‌ ಕುಮಾರ್‌ ಹೆಗಡೆ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ಡ್ಯಾಮೇಜ್‌ ಮಾಡಿದೆ ಅನ್ನೋ ಅಭಿಪ್ರಾಯಗಳು ದಟ್ಟವಾಗಿ ಕೇಳಿ ಬರುತ್ತಿದೆ.

ಈಗಾಗಲೇ ವಿವಿಧ ಪಕ್ಷಗಳು ಬಿಜೆಪಿಯನ್ನು ಸಂವಿಧಾನ ವಿರೋಧಿ ಎಂದು ಕರೆದಿದೆ. ಅವರ ನಡೆನುಡಿಗಳು ಕೂಡ ಸಂವಿಧಾನಕ್ಕೆ ತದ್ವಿರುದ್ಧವಾಗಿ ಕಂಡು ಬರುತ್ತಿದೆ. ಅನಂತ್‌ ಕುಮಾರ್‌ ಹೆಗಡೆ ಬಿಜೆಪಿಯ ಅಜೆಂಡಾವನ್ನು ಬಾಯಿಬಿಟ್ಟು ಹೇಳುತ್ತಿದ್ದಾರೆ. ಆದ್ರೆ ಉಳಿದವರು  ಅದನ್ನು ತೋರ್ಪಡಿಸದೇ ಒಳಗಿಂದೊಳಗೆ ಸಂವಿಧಾನದ ವಿರುದ್ಧ ಕಿಡಿಕಾರುತ್ತಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

ಒಟ್ಟಿನಲ್ಲಿ ಬಿಜೆಪಿ ಕಳೆದ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ನಡೆಯಿಂದಾಗಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನವನ್ನು ಬದಲಿಸ್ತಾರೆ ಎನ್ನುವ ವಿಚಾರವನ್ನೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಗುರಾಣಿಯಾಗಿ ಬಳಸಿಕೊಂಡಿರುವುದನ್ನೂ ಗಮನಿಸಬಹುದು. ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೂಡ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದೆ. ಅನಂತ್‌ ಕುಮಾರ್‌ ಹೆಗಡೆಯನ್ನು ಪಕ್ಷದಿಂದ ಉಚ್ಛಾಟಿಸಿ, ಬಿಜೆಪಿ ಸಂವಿಧಾನದ ಮೇಲಿರುವ ಗೌರವವನ್ನು ದೇಶದ ಜನತೆಗೆ ತೋರಿಸಿಕೊಳ್ಳಲು ಇನ್ನೂ ಅವಕಾಶವಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ