ಅಂಚೆ ಇಲಾಖೆ ಸ್ಟ್ಯಾಂಪ್ ನಲ್ಲಿ ಪಾತಕಿ ಚೋಟಾ ರಾಜನ್, ಮುನ್ನ ಬಜರಂಗಿಯ ಚಿತ್ರ! - Mahanayaka
4:33 AM Thursday 16 - October 2025

ಅಂಚೆ ಇಲಾಖೆ ಸ್ಟ್ಯಾಂಪ್ ನಲ್ಲಿ ಪಾತಕಿ ಚೋಟಾ ರಾಜನ್, ಮುನ್ನ ಬಜರಂಗಿಯ ಚಿತ್ರ!

29/12/2020

ಲಕ್ನೋ: ಉತ್ತರಪ್ರದೇಶ ಅಂಚೆ ಇಲಾಖೆಯು ಪಾತಕಿಗಳಾದ ಚೋಟಾ ರಾಜನ್ ಮತ್ತು ಮುನ್ನ ಬಜರಂಗಿಗೆ ಗೌರವ ಸಲ್ಲಿಸಿದ್ದು, ಇದೀಗ ಇದು ತೀವ್ರವಾಗಿ ಚರ್ಚೆಗೆ ಕಾರಣವಾಗಿದ್ದು, ಅಂಚೆ ಇಲಾಖೆಯಲ್ಲಿ ಇಂತಹದ್ದೊಂದು ಘಟನೆ ನಡೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿದೆ.


Provided by

ಇಬ್ಬರು ಗ್ಯಾಂಗ್ ಸ್ಟಾರ್ ಗಳಿಗೆ ಉತ್ತರ ಪ್ರದೇಶದ ಅಂಚೆ ಇಲಾಖೆ ಗೌರವ ಸಲ್ಲಿಸಿದೆ. ಕಾನ್ಪುರದ ಅಂಚೆ ಇಲಾಖೆ ಬಿಡುಗಡೆಗೊಳಿಸಿರುವ ಐದು ರೂಪಾಯಿಯ ಸ್ಟ್ಯಾಂಪ್ ಗಳಲ್ಲಿ ಚೋಟಾ ರಾಜನ್, ಮುನ್ನಾ ಬಜರಂಗಿಯ ಚಿತ್ರವಿದೆ. ಪೋಸ್ಟ್ ಮಾಸ್ಟರ್ ಜನರಲ್ ವಿ.ಕೆ.ವರ್ಮಾ ಅವರು ಅಂಚೆ ಇಲಾಖೆಯ ಗುಮಾಸ್ತರ ಕಡೆಯಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಜಾರಿಯಲ್ಲಿರುವ ಮೈಸ್ಟ್ಯಾಂಪ್ ಯೋಜನೆಯಡಿಯಲ್ಲಿ ಇಲಾಖೆಗೆ 300 ರೂಪಾಯಿ ಪಾವತಿಸಿ ಸಾಧಕರ ಫೋಟೋಗಳನ್ನು ಸ್ಟ್ಯಾಂಪ್ ಪ್ರಕಟಿಸುವ ಅವಕಾಶವಿದೆ. ಆದರೆ, ಯಾರೋ ಚೋಟಾ ರಾಜನ್ ಹಾಗೂ ಮುನ್ನಾ ಬಜರಂಗಿಯ ಫೋಟೋವನ್ನು ಈ ಯೋಜನೆಯ ಮೂಲಕ ಪ್ರಕಟಿಸಿದ್ದಾರೆ. ಇದನ್ನು ಪರಾಮರ್ಶೆ ಮಾಡದೇ ಸ್ಟ್ಯಾಂಪ್ ಗಳನ್ನು ಪ್ರಕಟಿಸಲಾಗಿದೆ.

ಮಾಧ್ಯಮದೊಂದಿಗೆ ನಂಟು ಇರುವ ವ್ಯಕ್ತಿಯೋರ್ವ ಒಬ್ಬರು ಮುನ್ನ ಬಜರಂಗಿ (ಪ್ರೇಮ್ ಪ್ರಕಾಶ್) ಮತ್ತು ಛೋಟಾ ರಾಜನ್ (ಎಸ್ ರಾಜೇಂದ್ರ) ಹೆಸರಿನಲ್ಲಿ ಫಾರ್ಮ್‌ಗಳನ್ನು ಭರ್ತಿ ಮಾಡಿದ್ದರು. ಅವರ ಫೋಟೊಗಳನ್ನು ನೀಡಿದ ವ್ಯಕ್ತಿ, ತನ್ನ ಐಡೆಂಟಿ ಕಾರ್ಡ್ ತೋರಿಸಿದ್ದಾನೆ. ಈ ವೇಳೆ ಈ ವ್ಯಕ್ತಿಗಳು ಯಾರು ಎಂದು ಅಂಚೆ ನೌಕರ ಪ್ರಶ್ನಿಸಿದಾಗ ಅವರು ನನ್ನ ಪರಿಚಯಸ್ಥರು ಎಂದು ಹೇಳಿದ್ದಾನೆ. ಹಾಗಾಗಿ ವಿಚಾರಣೆ ನಡೆಸದೆಯೇ ಅವರು ಅದನ್ನು ಮುದ್ರಣಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ಕ್ಲರ್ಕ್ ನ್ನು ಈಗಾಗಲೇ ಅಮಾನತು ಮಾಡಲಾಗಿದೆ.

ಇತ್ತೀಚಿನ ಸುದ್ದಿ