ಸರ್… ನನ್ನ ಅಪ್ಪ ಅಮ್ಮನನ್ನು ನೀವು ಕೊಂದಿದ್ದೀರಿ” ಎನ್ನುತ್ತಲೇ ಹೆತ್ತವರನ್ನು ಹೂಳಲು ಹೊಂಡ ತೆಗೆದ ಪುತ್ರ | ಕರುಣಾಜನಕ ಕಥೆ - Mahanayaka

ಸರ್… ನನ್ನ ಅಪ್ಪ ಅಮ್ಮನನ್ನು ನೀವು ಕೊಂದಿದ್ದೀರಿ” ಎನ್ನುತ್ತಲೇ ಹೆತ್ತವರನ್ನು ಹೂಳಲು ಹೊಂಡ ತೆಗೆದ ಪುತ್ರ | ಕರುಣಾಜನಕ ಕಥೆ

29/12/2020

“ಸರ್… ನೀವು ನನ್ನ ಅಪ್ಪ ಅಮ್ಮನನ್ನು ಕೊಂದಿದ್ದೀರಿ” ಎನ್ನುತ್ತಲೇ ಪುತ್ರ ತನ್ನ ತಂದೆ-ತಾಯಿ ಅಂತ್ಯ ಸಂಸ್ಕಾರ ನಡೆಸಲು ಹೊಂಡ ತೋಡುತ್ತಿರುವ ದೃಶ್ಯ ಇಂದು ಕಂಡು ಬಂತು. ಈ ಘಟನೆ ನಡೆದಿರುವುದು ಕೇರಳದ ನಯಂತ್ತಿಂಕಾರದಲ್ಲಿ.  ತನ್ನ ಶೆಡ್ ನ್ನು ಮುಟ್ಟುಗೋಲು ಹಾಕಲು ಬಂದ ವೇಳೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡ ದಂಪತಿ, ಆಕಸ್ಮಿಕವಾಗಿ ಅಥವಾ ಪೊಲೀಸರು ಬೆಂಕಿ ಇಟ್ಟಿರುವುದರಿಂದಾಗಿ ಸುಟ್ಟು ಕರಕಲಾಗಿದ್ದು, ಇಂದು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಅಂತ್ಯಕ್ರಿಯೆಯನ್ನು ಅದೇ ಭೂಮಿಯಲ್ಲಿ ಪುತ್ರ ನೆರವೇರಿಸಿದ್ದಾನೆ.  ಈ ವೇಳೆಯೂ ಪೊಲೀಸರು ವಿರೋಧ ವ್ಯಕ್ತಪಡಿಸಿದಾಗ ಪುತ್ರ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.


Provided by

ಪೊಲೀಸರು ಹಾಗೂ ಅಧಿಕಾರಿಗಳು ತಮ್ಮ ಶೆಡ್ ನ್ನು ಮುಟ್ಟುಗೋಲು ಹಾಕಲು ಬಂದಾಗ ದಂಪತಿ ಪ್ರತಿಭಟಿಸಿದ್ದರು. ಈ ವೇಳೆ ಅಧಿಕಾರಿಗಳು ಬಲವಂತವಾಗಿ ಶೆಡ್ ಮುಟ್ಟುಗೋಲು ಹಾಕಲು ಯತ್ನಿಸಿದಾಗ ಸಾಂಕೇತಿಕವಾಗಿ ಆತ್ಮಹತ್ಯೆಗೆ ಯತ್ನಿಸಲು ದಂಪತಿ ಮುಂದಾಗಿದ್ದಾರೆ. ಇಬ್ಬರು ಕೂಡ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಸಿಗರ್ ಲೈಟ್ ಕೈಯಲ್ಲಿ ಹಿಡಿದುಕೊಂಡಿದ್ದರು. ಈ ವೇಳೆ ಪೊಲೀಸರು ಸಿಗರ್ ಲೈಟ್ ಕಸಿದುಕೊಳ್ಳಲು ಮುಂದಾದಾಗ ಆಕಸ್ಮಿಕವಾಗಿ ಸಿಗರ್ ಲೈಟ್ ಹತ್ತಿಕೊಂಡಿದ್ದು, ದಂಪತಿಯ ಮೇಲೆ ಬೆಂಕಿ ಹತ್ತಿಕೊಂಡಿದ್ದು, ಅವರು ಸಜೀವ ದಹನವಾಗಿದ್ದಾರೆ.  ಮೊದಲು ರಾಜನ್ ಅವರು ಸಾವನ್ನಪ್ಪಿದ್ದರೆ, ಆ ಬಳಿಕ ಅಂಬಿಲಿ ಅವರು ಸಾವನ್ನಪ್ಪಿದ್ದರು.

ರಾಜನ್ –ಅಂಬಲಿ ಅವರ ಕಿರಿಯ ಮಗ ತಾವು ವಾಸಿಸುತ್ತಿದ್ದ ಶೆಡ್ ಸಮೀಪದ ಹೊಲದಲ್ಲಿ ಹೊಂಡ ತೋಡುತ್ತಿರುವ ದೃಶ್ಯವನ್ನು ಕೇರಳದ ಕೊಡಿಕುನ್ನಿಲ್ ಸಂಸದ ಸುರೇಶ್  ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಪೊಲೀಸರು ನೆಲ ಅಗೆಯಲು ಬಿಡುತ್ತಿಲ್ಲ ಎಂದು ಮಗ ಹೇಳುತ್ತಿದ್ದಾನೆ. ಮತ್ತು ತನ್ನ ತಂದೆ-ತಾಯಿಯ ಸಾವಿಗೆ ಕಾರಣವಾದ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿ , ಸರ್ ನೀವು ನನ್ನ ತಂದೆ-ತಾಯಿಯನ್ನು ಕೊಂದಿದ್ದೀರಿ ಎಂದು ಹೇಳಿದ್ದು, ಆತ ಹೇಳುತ್ತಿದ್ದಂತೆಯೇ ಮಗನನ್ನು ಪೊಲೀಸರು ತಡೆಯುತ್ತಿರುವುದು ಕಂಡು ಬಂದಿದೆ.


Provided by

ಇಲ್ಲಿನ ಸ್ಥಳೀಯ ವ್ಯಕ್ತಿ ವಸಂತ ಎಂಬಾತ, ತನ್ನ ಆಸ್ತಿಯನ್ನು ಅತಿಕ್ರಮಣ ಮಾಡಿ, ರಾಜನ್ ಶೆಡ್ ನಿರ್ಮಾಣ ಮಾಡಿದ್ದಾನೆ ಎಂದು ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಕೋರ್ಡ್ ಅತಿಕ್ರಮಣ ತೆರವು ಮಾಡಲು ಹೇಳಿತ್ತು. ತೆರವು ಮಾಡಲು ಹೇಳಿ ಗಂಟೆಗಳಲ್ಲಿಯೇ ಪೊಲೀಸರು ಶೆಡ್ ತೆರವಿಗೆ ಮುಂದಾಗಿದ್ದಾರೆ. ಆದರೆ, ಅತಿಕ್ರಮಣ ತೆರವಿಗೆ ನೀಡಿದ್ದಾ ಆದೇಶವನ್ನು ಕೋರ್ಟ್ ಕೆಲವೇ ಗಂಟೆಗಳೊಳಗೆ ವಾಪಸ್ ಪಡೆದಿತ್ತು. ಆದರೆ ಪೊಲೀಸರು  ಕೆಲವೇ ಕ್ಷಣಗಳಲ್ಲಿ ಬಂದಿದ್ದು,ಇಷ್ಟೆಲ್ಲ ಅನಾಹುತಕ್ಕೆ ಕಾರಣರಾಗಿದ್ದಾರೆ ಎಂದು ರಾಜನ್  ಅಂಬಲಿಯ ಮಕ್ಕಳಾದ ರಂಜಿತ್ ಮತ್ತು ರಾಹುಲ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ