ತಿರುಮಲದಲ್ಲಿ ಚಿತಾ ಕಾರ್ಯಾಚರಣೆ: ಬೋನಿಗೆ ಬಿದ್ದ ಮತ್ತೊಂದು ಚಿರತೆ - Mahanayaka

ತಿರುಮಲದಲ್ಲಿ ಚಿತಾ ಕಾರ್ಯಾಚರಣೆ: ಬೋನಿಗೆ ಬಿದ್ದ ಮತ್ತೊಂದು ಚಿರತೆ

28/08/2023


Provided by

ಪಾದಚಾರಿ ಮಾರ್ಗದಲ್ಲಿ ಇಟ್ಟಿದ್ದ ಬೋನಿನೊಳಗೆ ಮತ್ತೊಂದು ಚಿರತೆ ಸಿಕ್ಕಿಬಿದ್ದ ಘಟನೆ ತಿರುಮಲದ ಅಲಿಪಿರಿಯ ಏಳನೇ ಮೈಲಿನಲ್ಲಿ ನಡೆದಿದೆ.

ಸೆರೆ ಹಿಡಿಯಲಾದ ಚಿರತೆಯನ್ನು ಶ್ರೀ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್‌ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂ.22ರಂದು 7ನೇ ಮೈಲಿನಲ್ಲಿ ಅರಣ್ಯಾಧಿಕಾರಿಗಳು ಚಿರತೆಗಳನ್ನು ಸೆರೆ ಹಿಡಿಯುತ್ತಿದ್ದು, ಜೂ.23ರಂದು ರಾತ್ರಿ 7ನೇ ಮೈಲಿ ಸಮೀಪದ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದರು.

ಆಗಸ್ಟ್ 11 ರಂದು ಅಲಿಪಿರಿ ಮಾರ್ಗದ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಎರಡು ವರ್ಷದ ಬಾಲಕಿ ಲಕ್ಷಿತಾ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿತ್ತು. ಆಗಸ್ಟ್ 14 ಮತ್ತು 17 ರಂದು ಬಾಲಕಿಯ ಮೇಲೆ ದಾಳಿ ನಡೆಸಿದ ಪ್ರದೇಶದ ಬಳಿ ಎರಡು ಚಿರತೆಗಳು ಬೋನ್‌ನಲ್ಲಿ ಸಿಲುಕಿದ್ದವು.

ಟ್ರ್ಯಾಪ್ ಕ್ಯಾಮೆರಾ ಮೂಲಕ 7ನೇ ಮೈಲಿಯಲ್ಲಿ ಮತ್ತೊಂದು ಚಿರತೆ ಓಡಾಡುತ್ತಿರುವುದನ್ನು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಚಿರತೆ ಸೆರೆಗೆ 10 ದಿನ ಕಾರ್ಯಾಚರಣೆ ನಡೆಸಲಾಗಿದೆ. ಕೊನೆಗೂ ಚಿರತೆ ಬೋನಿಗೆ ಬಿದ್ದಿದೆ.

ಇತ್ತೀಚಿನ ಸುದ್ದಿ