ಕಾಂತಾರ-2 ಸಿನಿಮಾಕ್ಕೆ ಅಣ್ಣಪ್ಪ ಪಂಜುರ್ಲಿ ದೈವದಿಂದ ಅನುಮತಿ
ಕಾಂತಾರ ಸಿನಿಮಾದ ಯಶಸ್ಸಿನ ಬಳಿಕ ಕಾಂತಾರ- 2 ಸಿನಿಮಾ ಮಾಡಲು ನಿರ್ದೇಶಕ ರಿಷಭ್ ಶೆಟ್ಟಿ ಪ್ಲ್ಯಾನ್ ಮಾಡಿದ್ದಾರೆ ಎಂಬ ವಿಚಾರವೊಂದು ಹರಿದಾಡುತ್ತಿತ್ತು. ಅದಕ್ಕೆ ಇದೀಗ ಸ್ಪಷ್ಟನೆ ದೊರೆತಂತಿದೆ.
ಇತ್ತೀಚೆಗೆ ರಿಷಭ್ ಶೆಟ್ಟಿ ಕಾಂತಾರ ಸಿನಿಮಾ ತಂಡೊಂದಿಗೆ ಅಣ್ಣಪ್ಪ ಪಂಜುರ್ಲಿ ದೈವದ ನೇಮದ ವೇಳೆ ಸಿನಿಮಾಕ್ಕೆ ಅನುಮತಿ ಕೋರಿದ್ದರು. ದೈವ ಅನುಮತಿಯೂ ನೀಡಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ನಟ ರಿಷಬ್ ಶೆಟ್ಟಿ ಅನುಮತಿ ಪಡೆದ ಬಗ್ಗೆ ದೈವ ನರ್ತಕ ಉಮೇಶ್ ಗಂಧಕಾಡು ಮಾತನಾಡಿ, ರಿಷಭ್ ಶೆಟ್ಟಿಯವರು ಕೆಲವು ದಿನಗಳ ಹಿಂದೆ ಅಣ್ಣಪ್ಪ ಪಂಜುರ್ಲಿ ಸೇವೆ ಮಾಡಬೇಕೆಂದು ಕೇಳಿಕೊಂಡಿದ್ದರು. ಅದಕ್ಕಾಗಿ ನಗರದ ಬಂದಲೆಯ ಮಡಿವಾಳಬೆಟ್ಟು ದೈವಸ್ಥಾನದಲ್ಲಿ ನಾನೇ ಅಣ್ಣಪ್ಪ ಪಂಜುರ್ಲಿ ದೈವದ ನರ್ತನ ಸೇವೆ ಮಾಡಿದ್ದೆ. ದೈವದ ನೇಮದ ವೇಳೆ ಹೇಳುವ ನುಡಿ ನರ್ತಕ ಹೇಳುವುದಲ್ಲ ಬದಲಾಗಿ ದೈವವೇ ಹೇಳುವುದು. ಅದು ದೈವ ನರ್ತಕರಾದ ನಮಗೆ ಗೊತ್ತಾಗದೇ ಆಗುವಂತದ್ದು ಎಂದರು.
ಅಣ್ಣಪ್ಪ ಪಂಜುರ್ಲಿಯ ನೇಮದ ವೇಳೆ ಪುಷ್ಪ ಪ್ರಶ್ನೆಯಲ್ಲಿ ದೈವದ ಬಳಿ ಕಾಂತಾರ-2 ಸಿನಿಮಾ ಮಾಡಲು ಅರಿಕೆ ಮಾಡಿದ್ದ ವೇಳೆ ಶುಭ ಶಕುನ ಬಂದಿದೆ. ಕಾಂತಾರ-2 ಸಿನಿಮಾ ಬಹಳ ಶುದ್ಧಾಚಾರದಿಂದ ಮಾಡಬೇಕು. ಧರ್ಮಸ್ಥಳಕ್ಕೆ ತೆರಳಿ ಅಣ್ಣಪ್ಪ ಪಂಜುರ್ಲಿ ದೈವದ ಬಳಿ ಪ್ರಾರ್ಥನೆಯೂ ಮಾಡಬೇಕು ಎಂದು ದೈವ ನುಡಿದಿದೆ ಎಂದು ಅಣ್ಣಪ್ಪ ಪಂಜುರ್ಲಿ ದೈವ ನರ್ತಕ ಉಮೇಶ್ ಗಂಧಕಾಡು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka