ಶ್ರದ್ಧಾ ಹತ್ಯೆಯ ಬಳಿಕ ಮತ್ತೊಂದು ಭೀಕರ ಹತ್ಯೆ: ದೆಹಲಿಯನ್ನು ಬೆಚ್ಚಿಬೀಳಿಸಿದ ಮತ್ತೊಂದು ಕೇಸ್! - Mahanayaka
7:23 PM Thursday 12 - December 2024

ಶ್ರದ್ಧಾ ಹತ್ಯೆಯ ಬಳಿಕ ಮತ್ತೊಂದು ಭೀಕರ ಹತ್ಯೆ: ದೆಹಲಿಯನ್ನು ಬೆಚ್ಚಿಬೀಳಿಸಿದ ಮತ್ತೊಂದು ಕೇಸ್!

murder in delhi
28/11/2022

ದೆಹಲಿ: ಶ್ರದ್ಧಾ ವಾಲ್ಕರ್ ಭೀಕರ ಹತ್ಯೆ ಪ್ರಕರಣ ತನಿಖೆ ಪೂರ್ಣಗೊಳ್ಳುವ ಮೊದಲೇ ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದ್ದು, ವ್ಯಕ್ತಿಯೋರ್ವರನ್ನು ಹತ್ಯೆ ಗೈದು 10 ತುಂಡಾಗಿ ಕತ್ತರಿಸಿ ಎಸೆಯಲಾಗಿದೆ.

ದೆಹಲಿಯ ಪಾಂಡವ್ ನಗರದ ಅಂಜನ್ ದಾಸ್ ಎಂಬ ವ್ಯಕ್ತಿ ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೇ 10ರಂದು ಅಂಜನ್ ದಾಸ್ ಹೆಂಡತಿ ಪೂನಮ್ ಹಾಗೂ ಮಗ ದೀಪಕ್ ಸೇರಿ ಆತನನ್ನು ಬರ್ಬರವಾಗಿ ಹತ್ಯೆ ಮಾಡಿ ಕತ್ತರಿಸಿ ಹಾಕಿದ್ದರು.

ಹತ್ಯೆಯ ಬಳಿಕ ಆತನ ದೇಹದ 10 ಭಾಗಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ 4 ದಿನಗಳಲ್ಲಿ ಎಸೆದಿದ್ದರು. ಜೂನ್ 5ರಂದು ಅಂಜನ್ ದಾಸ್ ನ ದೇಹದ ಭಾಗಗಳನ್ನು ರಾಮಲೀಲಾ ಮೈದಾನದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು.

ಮೃತದೇಹದ ಭಾಗಗಳು ಪತ್ತೆಯಾದ ಹಿನ್ನೆಲೆಯಲ್ಲಿ  ಪೊಲೀಸರು ತನಿಖೆ ಆರಂಭಿಸಿದ್ದರು.  ಈ ವೇಳೆ ಪತ್ನಿ ಹಾಗೂ ಪುತ್ರನ ಕೃತ್ಯ ಬೆಳಕಿಗೆ ಬಂದಿದೆ. ದೇಹವನ್ನು ತುಂಡಾಗಿ ಕತ್ತರಿಸಿದ ಬಳಿಕ ತಲೆ ಬುರುಡೆಯನ್ನು ಆರೋಪಿಗಳು ಸುಟ್ಟು ಹಾಕಿದ್ದರು.

ಅನೈತಿಕ ಸಂಬಂಧ ಹತ್ಯೆಗೆ ಕಾರಣ ಎಂದು ಹೇಳಲಾಗಿದೆ. ಈಗಾಗಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು,  ಪಾಂಡವ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಇನ್ನಷ್ಟು ಮಾಹಿತಿಗಳು ತಿಳಿದುಬರಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ