ಕಾಂತಾರ ಟೀಮ್ ಗೆ ಮತ್ತೊಂದು ಆಘಾತ: ಚಿತ್ರೀಕರಣಕ್ಕೆ ಆಗಮಿಸಿದ್ದ ಕಲಾವಿದ ಹೃದಯಾಘಾತಕ್ಕೆ ಬಲಿ

ಶಿವಮೊಗ್ಗ: ಕಾಂತಾರ ಚಾಪ್ಟರ್ 1ರ ಚಿತ್ರೀಕರಣಕ್ಕಾಗಿ ಆಗಮಿಸಿದ್ದ ಕೇರಳ ಮೂಲದ ಮಿಮಿಕ್ರಿ ಕಲಾವಿದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಮ್ ಸ್ಟೇಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಿಜು ವಿ.ಕೆ.( Niju V.K.) ಮೃತಪಟ್ಟಿರುವ ಕಲಾವಿದ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ನಿಜು ಅವರು ಕಾಂತಾರ ಚಾಪ್ಟರ್ 1ರ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು ಎನ್ನಲಾಗಿದೆ. ನಿನ್ನೆ ಆಗುಂಬೆ ಹೋಮ್ ಸ್ಟೇವೊಂದರಲ್ಲಿ ತಂಗಿದ್ದ ಅವರಿಗೆ ರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು.
ತಕ್ಷಣವೇ ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತುತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ನಿಜು ಅವರ ಮೃತದೇಹವನ್ನು ತೀರ್ಥ ಹಳ್ಳಿಯ ಜೆ.ಸಿ. ಆಸ್ಪತ್ರೆಯಲ್ಲಿ ಇರಿಸಲಾಗಿದೆ. ನಿಜು ಅವರ ಕುಟುಂಬಸ್ಥರು ಕೇರಳದಿಂದ ತೀರ್ಥಹಳ್ಳಿಗೆ ಆಗಮಿಸುತ್ತಿದ್ದಾರೆ.
ಕಾಂತಾರದಲ್ಲಿ ನಟಿಸಿದ ಮೂವರು ಕಲಾವಿದರ ಸಾವು ಇದೀಗ ಚರ್ಚೆಗೀಡಾಗುತ್ತಿದೆ. ಇತ್ತೀಚೆಗಷ್ಟೇ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: