ಅರಸೀಕೆರೆ ಹೆಂಗಸರು ನನ್ನನ್ನು ಕಂಡರೆ ಬೈತಾರೆ | ಸದನದಲ್ಲಿ ಅಳಲು ತೋರಿಕೊಂಡ ಶಾಸಕ ಶಿವಲಿಂಗೇಗೌಡ!
ಬೆಂಗಳೂರು: ನಾನು ಅರಸಿಕೆರೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅರಸೀಕೆರೆ ಹೆಂಗಸರು ನನ್ನನ್ನು ನೋಡಿದರೆ ಬೈತಾರೆ ಎಂದು ವಿಧಾನಸಭೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅರಸೀಕೆರೆಯಲ್ಲಿ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವ ವಿಚಾರವಾಗಿ ಸಚಿವರು ಪ್ರಶ್ನೋತ್ತರ ಅವಧಿಯಲ್ಲಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಪರವಾಗಿ ಉತ್ತರಿಸಿದ ಶಿವರಾಮ್ ಹೆಬ್ಬಾರ್, ಈ ಪ್ರದೇಶದಲ್ಲಿ ಭೂಸ್ವಾಧೀನದ ಅಗತ್ಯವಿದ್ದು, ಈ ಭೂಸ್ವಾಧೀನಕ್ಕೆ 9.62 ಕೋ.ರೂ. ಅನುದಾನ ಬೇಕಿದೆ. ಅನುದಾನ ಇಲ್ಲದ ಕಾರಣ ಕಾಮಗಾರಿ ನಡೆಯುತ್ತಿಲ್ಲ ಎಂದು ಹೇಳಿದರು. ಈ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಒಪ್ಪಿಗೆ ದೊರೆತ ತಕ್ಷಣವೇ ಕಾಮಗಾರಿ ಮುಂದುವರಿಸಲಾಗುವುದು ಎಂದು ಹೇಳಿದರು.
ಸಚಿವರ ಉತ್ತರದಿಂದ ತೃಪ್ತರಾಗದ ಶಿವಲಿಂಗೇಗೌಡರು ಮತ್ತೆ ಪ್ರತಿಕ್ರಿಯಿಸಿ, ಬೇರೆಲ್ಲ ನಗರಗಳಲ್ಲಿ ಕಾಮಗಾರಿ ಮಾಡಲು ಅನುದಾನದ ಕೊರತೆ ಇಲ್ಲ. ಅರಸೀಕೆರೆಯಲ್ಲಿ ಕೆಲಸ ಮಾಡಲು ಮಾತ್ರ ಅನುದಾನ ಇಲ್ಲ ಎಂಬ ಉತ್ತರ ಬರುತ್ತಿದೆ. ನಿಮ್ಮ ಎಡವಟ್ಟಿನಿಂದ ನಾನು ಅರಸೀಕೆರೆಗೆ ಹೋಗದಂತಾಗಿದೆ. ಅಲ್ಲಿನ ಹೆಂಗಸರು ನನ್ನನ್ನು ನೋಡಿದರೆ, ಬೈತಾರೆ, ಒಳಚರಂಡಿಯೂ ಬೇಡ ಏನು ಬೇಡ, ಮೊದಲು ಕಿತ್ತುಕೊಂಡು ಹೋಗಿ ಅನ್ನುತ್ತಿದ್ದಾರೆ ಎಂಧು ಆಕ್ರೋಶ ವ್ಯಕ್ತಪಡಿಸಿದರು.