ತುಳುವರ ಅಚ್ಚುಮೆಚ್ಚಿನ ನಟ ಅರವಿಂದ್ ಬೋಳಾರ್ ನಟನೆಗೆ ಜಿಲ್ಲಾಧಿಕಾರಿ ಮೆಚ್ಚುಗೆ - Mahanayaka
6:56 PM Wednesday 12 - November 2025

ತುಳುವರ ಅಚ್ಚುಮೆಚ್ಚಿನ ನಟ ಅರವಿಂದ್ ಬೋಳಾರ್ ನಟನೆಗೆ ಜಿಲ್ಲಾಧಿಕಾರಿ ಮೆಚ್ಚುಗೆ

aravinda bolar
25/07/2022

ಮಂಗಳೂರು: ಖ್ಯಾತ ತುಳು ಚಲನಚಿತ್ರ ನಟ ಹಾಗೂ ನಾಟಕ ಕಲಾವಿದ ಅರವಿಂದ್ ಬೋಳಾರ್ ಅವರ ನಟನಾ ಕೌಶಲ್ಯಕ್ಕೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಮವಾರ ಜಿಲ್ಲಾಧಿಕಾರಿಯವರ ಕಚೇರಿಗೆ ಬಂದ ಕಲಾವಿದ ಅರವಿಂದ ಬೋಳಾರ್ ಅವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಯವರು, ಬೋಳಾರ್ ಅವರ ನಟನಾ ಶೈಲಿ, ಡೈಲಾಗ್ ಡೆಲಿವರಿ ಹಾಗೂ ಅವರ ವೃತ್ತಿಯನ್ನು ಪ್ರಶಂಶಿಸಿದರು.  ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಇದ್ದರು.

ತುಳು ನಾಟಕ, ಸಿನಿಮಾಗಳಲ್ಲದೇ ಇತರ ಭಾಷೆಗಳಲ್ಲೂ ನಟಿಸಿ ತಮ್ಮ ಕಲಾ ಸಾಮರ್ಥ್ಯವನ್ನು ಸಾಬೀತು ಪಡಿಸಿರುವ ಅರವಿಂದ್ ಬೋಳಾರ್ ಅವರು, ಕರಾವಳಿಯಲ್ಲಿ ಚಿರಪರಿಚಿತರಾಗಿದ್ದಾರೆ.

ಇವರ ಹಾಸ್ಯಕ್ಕೆ ಜನರು ಎಷ್ಟೊಂದು ಮಾರು ಹೋಗಿದ್ದಾರೆಂದರೆ, ಇವರನ್ನು ನೋಡಿದರೆ ಸಾಕು ಜನ ನಗಲು ಆರಂಭಿಸುತ್ತಾರೆ. ಅಂತಹ ವಿಶೇಷ ನಟ ಮಾತ್ರವಲ್ಲದೇ ಮಾದರಿ ವ್ಯಕ್ತಿತ್ವಕ್ಕೆ ಅರವಿಂದ್ ಬೋಳಾರ್ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ