ನೀರು ಪೋಲು ಮಾಡುತ್ತೀರಾ? ಹಾಗಿದ್ರೆ ದಂಡ ಕಟ್ಟಲು ಸಿದ್ಧರಾಗಿ! - Mahanayaka

ನೀರು ಪೋಲು ಮಾಡುತ್ತೀರಾ? ಹಾಗಿದ್ರೆ ದಂಡ ಕಟ್ಟಲು ಸಿದ್ಧರಾಗಿ!

water
17/02/2025

Save Water– ಬೆಂಗಳೂರು:  ಚಳಿಗಾಲ ಮುಗಿಯುವ ಮೊದಲೇ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.  ಸಿಲಿಕಾನ್ ಸಿಟಿಯಲ್ಲಿ ಇದೀಗ ಬೇಸಿಗೆ ಕಾಲ ಆರಂಭವಾಗುವುದಕ್ಕೂ ಮೊದಲೇ ಅನಗತ್ಯವಾಗಿ ನೀರು ಪೋಲು ಮಾಡುವವರಿಗೆ ದಂಡ ವಿಧಿಸಲು ಜಲಮಂಡಳಿ ಸಿದ್ಧತೆ ನಡೆಸಿದೆ.


Provided by

ಕಳೆದ ಬೇಸಿಗೆ ಕಾಲದಲ್ಲಿ ಜಾರಿ ಮಾಡಲಾಗಿದ್ದ ಆದೇಶವನ್ನು ಜಲಮಂಡಳಿ ಮರು ಜಾರಿಗೊಳಿಸಿದೆ.  ಆದೇಶ ಉಲ್ಲಂಘಿಸುವವರ ವಿರುದ್ಧ 1916 ಸಹಾಯವಾಣಿಗೆ ದೂರು ನೀಡುವಂತೆ ಸೂಚನೆ ನೀಡಲಾಗಿದೆ.

ಆದೇಶ ಹೀಗಿದೆ:


Provided by

ಕುಡಿಯುವ ನೀರನ್ನು ವಾಹನ ಸ್ವಚ್ಛತೆಗೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಕಾರಂಜಿಯಂತಹ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿ ಕುಡಿಯುವ ನೀರಿನ ಹೊರತು ಇನ್ನಿತರ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ  ಬಳಸುವುದನ್ನು ನಿಷೇಧಿಸಲಾಗಿದೆ.

ದಂಡ ಎಷ್ಟು?:

ಜಲಮಂಡಳಿಯ ಈ ಆದೇಶವನ್ನು ಉಲ್ಲಂಘನೆ ಮಾಡಿದರೆ, ಜಲಮಂಡಳಿ ಕಾಯ್ದೆ 1964ರ ಕಲಂ 109ರಂತೆ 5 ಸಾವಿರ ರೂ. ದಂಡ ವಿಧಿಸಲಾಗುವುದು, ಉಲ್ಲಂಘನೆ ಮರುಕಳಿಸಿದರೆ, ದಂಡದ ಮೊತ್ತ 5 ಸಾವಿರದ ಜೊತೆಗೆ ಹೆಚ್ಚುವರಿ 500 ರಂತೆ ಪ್ರತಿ ದಿನ ವಿಧಿಸಲಾಗುವುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ