ತಾಯಿ-ಮಗನ ಸಾವಿಗೆ ಕಾರಣವಾಗಿದ್ದ ಆರೋಪಿ ಅರ್ನಬ್ ಗೋಸ್ವಾಮಿ! | ಇಲ್ಲಿದೆ ನೋಡಿ ಪ್ರಕರಣದ ವಿವರ - Mahanayaka
8:40 AM Sunday 15 - September 2024

ತಾಯಿ-ಮಗನ ಸಾವಿಗೆ ಕಾರಣವಾಗಿದ್ದ ಆರೋಪಿ ಅರ್ನಬ್ ಗೋಸ್ವಾಮಿ! | ಇಲ್ಲಿದೆ ನೋಡಿ ಪ್ರಕರಣದ ವಿವರ

04/11/2020

ಮುಂಬೈ: ಮಹಾರಾಷ್ಟ್ರದ ಅಲಿಬಾಗ್‌ನ 53 ವರ್ಷದ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದಾ ನಾಯಕ್ ಅವರು 2018ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಆತ್ಮಹತ್ಯೆಗೆ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಕಾರಣ ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಕಾಲದ ಬಳಿಕ ಅರ್ನಬ್ ಗೋಸ್ವಾಮಿಯನ್ನು ಸಿಐಡಿ ತಂಡವು ಬುಧವಾರ ವಶಕ್ಕೆ ಪಡೆದಿದೆ.


ತಮಗೆ ಪಾವತಿಸಬೇಕಿದ್ದ  5.40 ಲಕ್ಷ ರೂಪಾಯಿ ಗಳನ್ನು ಅರ್ನಬ್‌ ಗೋಸ್ವಾಮಿ ಪಾವತಿಸಿಲ್ಲ. ಆ ಕಾರಣ ನಮ್ಮ ಕುಟುಂಬ ತೀವ್ರ ಆರ್ಥಿಕ ತೊಂದರೆಗೆ ಒಳಗಾಯಿತು. ಹೀಗಾಗಿ ನಾವು ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿತ್ತು.


ಅಲಿಬಾಗ್ ಪೊಲೀಸರು ಈ ಪ್ರಕರಣವನ್ನು 2018ರಕ್ಕು ದಾಖಲಿಸಿಕೊಂಡಿದ್ದರು. 2020ರ ಮೇ ತಿಂಗಳಲ್ಲಿ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಲಾಗಿತ್ತು. ಸದ್ಯ ಆರೋಪಿ ಅರ್ನಬ್ ಗೋಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ನನ್ನ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಅರ್ನಬ್ ಗೋಸ್ವಾಮಿ ಹೈಡ್ರಾಮಾ ಆಡಿದ್ದಾನೆ.



Provided by

ಇತ್ತೀಚಿನ ಸುದ್ದಿ