ಟೀ ವ್ಯಾಪಾರಿಯಿಂದ ಹಣ ಸುಲಿಗೆ ಮಾಡಿದ್ದ ಆರೋಪಿಗಳ‌ ಬಂಧನ - Mahanayaka

ಟೀ ವ್ಯಾಪಾರಿಯಿಂದ ಹಣ ಸುಲಿಗೆ ಮಾಡಿದ್ದ ಆರೋಪಿಗಳ‌ ಬಂಧನ

tea
19/08/2023


Provided by

ಬೆಂಗಳೂರು ನಗರ: ದಕ್ಷಿಣ ವಿಭಾಗದ ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸರು‌ ಕಾರ್ಯಚರಣೆ ನಡೆಸಿ ಟೀ ವ್ಯಾಪಾರಿಯಿಂದ 15 ಲಕ್ಷ ರೂ ಸುಲಿಗೆ ಮಾಡಿದ್ದ 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಹನುಮಂತನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ತ್ಯಾಗರಾಜನಗರದ ಟೀ ವ್ಯಾಪಾರಿಯೊಬ್ಬನನ್ನು ಅಪಹರಿಸಿ, ಹೆದರಿಸಿ, ಹಲ್ಲೆ ಮಾಡಿ, ಒಂದು ದಿನ ರೂಮ್ ನಲ್ಲಿ ಕೂಡಿ ಹಾಕಿದ್ದಲ್ಲದೇ, ಆತನಿಂದ ಆರೋಪಿಗಳು ತಮ್ಮ ಖಾತೆಗಳಿಗೆ 15 ಲಕ್ಷ ರೂ ಹಣ ವರ್ಗಾವಣೆ ಮಾಡಿಕೊಂಡಿರುತ್ತಾರೆ.

ಹೀಗೆ  ಹಣವನ್ನು ಸುಲಿಗೆ ಮಾಡಿದ್ದ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಹನುಮಂತನಗರ ಪೊಲೀಸರು ದಿನಾಂಕ: 16/08/2023ರಂದು 8 ಜನ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 1 ಲಕ್ಷ ರೂ ನಗದು, ಹಾಗೂ ಕೃತ್ಯಕ್ಕೆ ಬಳಸಿದ ಒಂದು ರೆನಾಲ್ಡ್ ಕಂಪನಿಯ ಕಾರು, ಒಂದು ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ, 08 ಮೊಬೈಲ್ ಸೋನ್‌ಗಳನ್ನು ವರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ ರವರ ಮಾರ್ಗದರ್ಶನದಲ್ಲಿ ಎ.ಎ.ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾಗರಾಜ ಜಿ.ರವರ ಉಸ್ತುವಾರಿಯಲ್ಲಿ, ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ವಿನೋದ್ ಭಟ್ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಇತ್ತೀಚಿನ ಸುದ್ದಿ