ಮಹಾ ಕುಂಭಮೇಳದಲ್ಲಿ ಡಿ.ಕೆ.ಶಿವಕುಮಾರ್ ದಂಪತಿ ಭಾಗಿ: ಪುಣ್ಯಸ್ನಾನ - Mahanayaka

ಮಹಾ ಕುಂಭಮೇಳದಲ್ಲಿ ಡಿ.ಕೆ.ಶಿವಕುಮಾರ್ ದಂಪತಿ ಭಾಗಿ: ಪುಣ್ಯಸ್ನಾನ

d k shivakumar
09/02/2025

Maha Kumbh Mela: ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ದಂಪತಿ ಭಾಗಿಯಾಗಿ ಪುಣ್ಯ ಸ್ನಾನ ಮಾಡಿದರು.


Provided by

ಉತ್ತರ ಪ್ರದೇಶದ ಕೈಗಾರಿಕಾ ಸಚಿವ ನಂದಗೋಪಾಲ ಗುಪ್ತಾ ಅವರು ಡಿ.ಕೆ.ಶಿವಕುಮಾರ್ ದಂಪತಿಗೆ ಭವ್ಯ ಸ್ವಾಗತಕೋರಿದರು. ತ್ರಿವೇಣಿ ಸಂಗಮದಲ್ಲಿ ಡಿಕೆಶಿ ದಂಪತಿ ಪುಣ್ಯಸ್ನಾನ ಮಾಡಿದರು.


Provided by

ಬಳಿಕ ನೊಣವಿನಕೆರೆ ಅಜ್ಜಯ್ಯ ಆಶೀರ್ವಾದ ಪಡೆದರು. ಕುಂಭಮೇಳದಲ್ಲಿದ್ದ ಸಾಧುಗಳ ಆಶೀರ್ವಾದವನ್ನೂ  ಡಿ.ಕೆ.ಶಿವಕುಮಾರ್ ದಂಪತಿ ಪಡೆದುಕೊಂಡರು.

114 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ದಂಪತಿ ಇಂದು ಮತ್ತು ನಾಳೆ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ