10 ದಿನ ಸಾವಿನೊಂದಿಗೆ ಹೋರಾಡಿ ಕೊನೆಗೆ ಮೃತಪಟ್ಟ ವಿದ್ಯಾರ್ಥಿನಿ! - Mahanayaka
12:03 PM Thursday 1 - January 2026

10 ದಿನ ಸಾವಿನೊಂದಿಗೆ ಹೋರಾಡಿ ಕೊನೆಗೆ ಮೃತಪಟ್ಟ ವಿದ್ಯಾರ್ಥಿನಿ!

rency
24/03/2021

ಬೆಳ್ತಂಗಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ  ಸಾವಿಗೀಡಾದ ಘಟನೆ ನಡೆದಿದ್ದು, ಮಾರ್ಚ್ 14ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ.23ರಂದು  ರಾತ್ರಿ  ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.

ಗಂಡಿಬಾಗಿಲು ದೇವಗಿರಿ ಚೇನಪಳ್ಳಿ ಬಿಜು ಅವರ 20 ವರ್ಷ ವಯಸ್ಸಿನ ಪುತ್ರಿ ರಿನ್ಸಿ ಆತ್ಮಹತ್ಯೆಗೆ ಶರಣಾದವರಾದ ವಿದ್ಯಾರ್ಥಿನಿ. ಮಾರ್ಚ್ 14ರಂದು ವಿಷ ಸೇವಿಸಿದ್ದ ಈಕೆ ಸುಮಾರು 10 ದಿನಗಳ ಕಾಲ ವೈದ್ಯರ ಸತತ ಚಿಕಿತ್ಸೆಯ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ವಿದ್ಯಾರ್ಥಿನಿ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಖಿನ್ನತೆಗೊಳಗಾಗುತ್ತಿದ್ದು, ಆತ್ಮಹತ್ಯೆ ಮತ್ತು ಆತ್ಮಹತ್ಯೆ ಯತ್ನದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಮಕ್ಕಳು ಖಿನ್ನತೆಯಿಂದ ಬಳಲುತ್ತಿದ್ದರೆ ಅವರಿಗೆ ಮಾನಸಿಕ ತಜ್ಞರಿಂದ ಸೂಕ್ತ ಸಲಹೆಗಳನ್ನು ಕೊಡಿಸುವುದು ಉತ್ತಮ.

 

ಇದನ್ನೂ ಓದಿ:

ಸ್ಟ್ರೋಕ್ ಆಗಿದ್ದ ವಿದ್ಯಾರ್ಥಿಯನ್ನು ರೇಗಿಸಿದ ಸಹಪಾಠಿಗಳು | ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

ಇತ್ತೀಚಿನ ಸುದ್ದಿ