ಅಟ್ಯಾಕ್: ಇಸ್ರೇಲ್ ನ ಆಯರ್ನ್ ಡೋಮ್ ವಿರುದ್ಧ ಲೆಬನಾನ್ ನ ಹಿಜ್ ಬುಲ್ಲಾ ಆಕ್ರಮಣ - Mahanayaka

ಅಟ್ಯಾಕ್: ಇಸ್ರೇಲ್ ನ ಆಯರ್ನ್ ಡೋಮ್ ವಿರುದ್ಧ ಲೆಬನಾನ್ ನ ಹಿಜ್ ಬುಲ್ಲಾ ಆಕ್ರಮಣ

08/06/2024


Provided by

ಇಸ್ರೇಲನ್ನು ರಕ್ಷಿಸಲು ನಿಯೋಜಿಸಲಾಗಿರುವ ಆಯರ್ನ್ ಡೋಮ್ ವಿರುದ್ಧ ಲೆಬನಾನ್ ನ ಹಿಜ್ ಬುಲ್ಲಾ ಅಕ್ರಮಣ ನಡೆಸುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ. ಈ ಆಯರ್ನ್ ಡೋಮ್ ಸ್ಥಾಪನೆಗಾಗಿ ಇಸ್ರೇಲ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿತ್ತು. ಈ ಮೊದಲು ಹಮಾಸ್ ಮತ್ತು ಇರಾನ್ ನಡೆಸಿದ್ದ ಕ್ಷಿಪಣಿ ದಾಳಿಯನ್ನು ಈ ಡೋಮ್ ಸಾಕಷ್ಟು ತಡೆದಿತ್ತು. ಇದೀಗ ಈ ಅಯರ್ನ್ ಡೋಮ್ ವಿರುದ್ಧವೇ ದಾಳಿ ನಡೆಸುವ ಮೂಲಕ ಲೇಬನಾನ್ ಭಾರಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಶತ್ರುಗಳ ಕ್ಷಿಪಣಿಯನ್ನು ಪತ್ತೆ ಹಚ್ಚಿ ಅರ್ಧದಲ್ಲೇ ತಡೆಯುವುದಕ್ಕಾಗಿ ಐರನ್ ಡೊಮ್ ಸ್ಥಾಪಿಸಲಾಗಿದೆ ಆದರೆ ಈ ಐರನ್ ಡೋಮ್ ಮೇಲಿನ ಆಕ್ರಮಣವನ್ನೇ ತಡೆಯಲು ಇದಕ್ಕೆ ಸಾಧ್ಯವಾಗುವುದಿಲ್ಲ ಎಂಬ ಸಂದೇಶವನ್ನು ಸಾರುವುದಕ್ಕಾಗಿ ಅಕ್ರಮಣವನ್ನು ಹಿಸ್ ಬುಲ್ಲಾ ನಡೆಸಿತ್ತು.

 ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಕ್ಷಿಪಣಿ ಆಕ್ರಮಣವನ್ನು ಈ ಐರನ್ ಡೋಮ್ ಗೆ ತಡೆಯಲು ಸಾಧ್ಯವಾಗಿರಲಿಲ್ಲ. ಇಸ್ರೇಲ್ ಆಕ್ರಮಿತ ಪಶ್ಚಿಮ ನಫ್ತಾಲಿ ಎಂಬ ಪ್ರದೇಶದಲ್ಲಿ ಹಿಸ್ಬುಲ್ಲ ಈ ಅಕ್ರಮಣ ನಡೆಸಿದೆ. ಆದರೆ ಇಸ್ರೇಲ್ ಎಂದಿನಂತೆ ಯಾವ ಆಕ್ರಮಣವೂ ನಡೆದಿಲ್ಲ ಎಂದು ಹೇಳಿ ನುಣುಚ್ಚಿಕೊಂಡಿದೆ.. ಈ ಮೊದಲು ಗೋಲಾನ್ ಬೆಟ್ಟದಲ್ಲಿ ಸ್ಥಾಪಿಸಲಾಗಿದ್ದ ಐರನ್ ದೋಮ್ ನ ರೇಡಾರ್ ವ್ಯವಸ್ಥೆಯನ್ನು ನಾಶ ಮಾಡಿರುವುದಾಗಿ ಹಿಸ್ ಬುಲ್ಲಾ ಹೇಳಿತ್ತು.. ಈ ಆಕ್ರಮಣದಲ್ಲಿ ಹಲವು ಸೈನಿಕರು ಸಾವಿಗೀಡಾಗಿದ್ದರು ಮತ್ತು ಅನೇಕರಿಗೆ ಗಾಯಗಳಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ