ಅನಧಿಕೃತ ಕೋಚಿಂಗ್ ಸೆಂಟರ್ ಗಳ ಮೇಲೆ ದಾಳಿ: 8 ಕೋಚಿಂಗ್ ಸೆಂಟರ್ ಗಳಿಗೆ ನೋಟಿಸ್

ಔರಾದ್ : ಪಟ್ಟಣದ ನಾನಾ ಕಡೆಯಲ್ಲಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ, ಮಕ್ಕಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್ ಗಳು ಅನಧಿಕೃತವಾಗಿ ತಲೆ ಎತ್ತಿ, ಪಾಲಕರಿಂದ ಹಣ ವಸೂಲಿಗೆ ಇಳಿದಿವೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತರಬೇತಿ ಕೇಂದ್ರ ಮುಚ್ಚುವಂತೆ ಎಚ್ಚರಿಕೆ ನೀಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ನೇತೃತ್ವದಲ್ಲಿ ಸೋಮವಾರ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ತರಬೇತಿ ನೆಪದಲ್ಲಿ ನಡೆಸುತ್ತಿರುವ ನವೋದಯ, ಕಿತ್ತೂರ ಸೇರಿದಂತೆ ವಿವಿಧ 8 ಕೋಚಿಂಗ್ ಸೆಂಟರ್ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕೋಚಿಂಗ್ ಸೆಂಟರ್ ಗಳ ಮಾಲೀಕರ ಹಾಗೂ ಅನಧಿಕೃತ ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸಂಬಂಧಿಸಿದ ಸೆಂಟರ್‌ಗಳಿಗೆ ನೋಟಿಸ್ ನೀಡಿದ್ದಾರೆ.
ಪಟ್ಟಣದ ಅನಿಕೇತನ ನವೋದಯ ಅಕಾಡೆಮಿ, ಸೇವಾ ಕೋಚಿಂಗ್ ಸೆಂಟರ್, ಪ್ರಜ್ಞಾ ಕೋಚಿಂಗ್ ಸೆಂಟರ್, ಫ್ಯೂಚರ್ ಸ್ಟಾರ್ ಕೋಚಿಂಗ್ ಸೆಂಟರ್, ವಾಸವಿ ಕೋಚಿಂಗ್ ಸೆಂಟರ್, ನವೋದಯ ಸಕ್ಸೆಸ್ ಕೋಚಿಂಗ್ ಸೆಂಟರ್, ಸ್ವಾಮಿ ವಿವೇಕಾನಂದ ಕೋಚಿಂಗ್ ಸೆಂಟರ್, ಜ್ಞಾನ ಜ್ಯೋತಿ ಕೋಚಿಂಗ್ ಸೆಂಟರ್ ಸೇರಿದಂತೆ ಒಟ್ಟು 8 ಕೋಚಿಂಗ್ ಸೆಂಟರ್ ಗಳ ಮೇಲೆ ದಿಢೀರ್ ದಾಳಿ ಮಾಡಿದರು.
ಸಾವಿರಾರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಲ್ಲದೇ ಸೆಂಟರ್ ನಲ್ಲದ್ದ ಮುಖ್ಯಸ್ಥರಿಗೆ ನೋಟಿಸ್ ನೀಡುವ ಮೂಲಕ ಇನ್ಮುಂದೆ ಕೋಚಿಂಗ್ ಸೆಂಟರ್ ತೆರೆಯುವಂತಿಲ್ಲ. ತೆರೆದರೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಖಾಸಗಿ ಅನುದಾನ ರಹಿತ ಮತ್ತು ಅನುದಾನ ಸಹಿತ, ಸರಕಾರಿ ಶಾಲೆಯಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ನೀಡಲಾಗುತ್ತಿರುವುದು ಬಯಲಾಗಿದೆ. ಅಲ್ಲದೇ ದಾಖಲಾತಿ ಹೊಂದಿರುವ ಶಾಲೆಗಳಲ್ಲಿಯೂ ಮಕ್ಕಳ ಹಾಜರಾತಿ ನೀಡುತ್ತಿರುವುದು ಬಯಲಾಗಿದೆ. ಮೇಲಾಧಿಕಾರಿಗಳ ನಿರ್ದೇಶನದಂತೆ ಶಾಲೆಗಳ ಹಾಜರಾತಿ ಪರಿಶೀಲಿಸಿ ಅಂತಹ ಶಾಲೆಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಮುಖರಾದ ಬಿಆರ್ ಸಿ ನಾರಾಯಣ ರಾಠೋಡ್, ಇಸಿಒಗಳಾದ ಸಂಜೇಯ್ ಮೇತ್ರೆ, ಬಲಭೀಮ ಕುಲಕರ್ಣಿ, ಈಶ್ವರ ಕ್ಯಾದೆ ಸೇರಿದಂತೆ ಇತರರಿದ್ದರು.
ಸಿಆರ್ ಪಿಗಳಿಗೆ ನೋಟಿಸ್:
ಪಟ್ಟಣದಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಗಳು ಹಾಗೂ ಶಾಲೆ ನಡೆಯುತ್ತಿದ್ದರೂ ಇಲಾಖೆಯ ಗಮನಕ್ಕೆ ತಂದಿರುವದಿಲ್ಲ ಎಂದು ಸಿಆರ್ ಪಿ ಛಾಯಾ, ವೆಂಕಟ ಔತಾಳೆ ಅವರಿಗೆ ಬಿಇಒ ಟಿಆರ್ ದೊಡ್ಡೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಸೂಕ್ತ ಕ್ರಮಕ್ಕೆ ಡಿಡಿಪಿಐ ಮತ್ತು ಬಿಆರ್ ಸಿ ಅವರಿಗೆ ಪ್ರತಿಗಳು ನೀಡಿದ್ದಾರೆ.
ಶಾಲೆಗಳ ಮುಖ್ಯಗುರುಗಳಿಗೆ ನೋಟಿಸ್:
ಕೋಚಿಂಗ್ ಸೆಂಟರ್ ಗಳಿಗೆ ಮಕ್ಕಳು ಹೋಗುತ್ತಿದ್ದರೂ ಶಾಲೆಗಳ ಮುಖ್ಯಗುರುಗಳು ಹಾಜರಾತಿ ಹಾಕುತ್ತಿರುವದು ಕಂಡು ಬಂದಿದೆ. ಕೂಡಲೇ ಅಂತಹ ಎಲ್ಲ ಶಾಲೆಗಳ ಮುಖ್ಯಗುರುಗಳಿಗೆ ನೋಟಿಸ್ ನೀಡುವಂತೆ ಸಿಆರ್ ಪಿಗಳಿಗೆ ಸೂಚಿಸಿದರು. ಇನ್ಮುಂದೆ ಯಾವುದೇ ಕಾರಣಕ್ಕೂ ಶಾಲೆಯಲ್ಲಿ ಪ್ರವೇಶ ಪಡೆದು ಕೋಚಿಂಗ್ ಸೆಂಟರ್ ಗಳಿಗೆ ಮಕ್ಕಳು ಬರುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97