ರಾಮಮಂದಿರದ ಪೂಜಾರಿಗಳ ಉಡುಪಿನಲ್ಲಿ ಬದಲಾವಣೆ: ಕಾರಣ ಏನು..? - Mahanayaka
1:32 PM Saturday 25 - October 2025

ರಾಮಮಂದಿರದ ಪೂಜಾರಿಗಳ ಉಡುಪಿನಲ್ಲಿ ಬದಲಾವಣೆ: ಕಾರಣ ಏನು..?

05/07/2024

ರಾಮಮಂದಿರದ ಪೂಜಾರಿಗಳ ಉಡುಪಿನಲ್ಲಿ ರಾಮಮಂದಿರ ಟ್ರಸ್ಟ್ ಬದಲಾವಣೆ ಮಾಡಿದೆ. ಕಾವಿ ಬಣ್ಣದ ಉಡುಪಿನ ಬದಲು ಹಳದಿ ಬಣ್ಣದ ಉಡುಪನ್ನು ಟ್ರಸ್ಟ್ ಪೂಜಾರಿಗಳಿಗೆ ನೀಡಿದೆ.

ಈಗ ರಾಮಮಂದಿರ ಟ್ರಸ್ಟ್ ರಾಮನ ಗರ್ಭಗುಡಿಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇನ್ನು ರಾಮಮಂದಿರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿದೆ.
ಈ ಡ್ರೆಸ್​ ಕೋಡ್ ಅರ್ಚಕರಿಗೆ ಅನ್ವಯವಾಗಲಿದೆ, ದೇವಸ್ಥಾನದ ಅರ್ಚಕರು ಇನ್ನುಮುಂದೆ ಒಂದೇ ಬಗೆಯ ಉಡುಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಚಕರು ಚೌಬಂದಿ ಪೇಟ ಹಾಗೂ ಹಳದಿ ಬಣ್ಣದ ಧೋತಿ, ಕುರ್ತಾವನ್ನು ಧರಿಸಲಿದ್ದಾರೆ. ಇದಕ್ಕೂ ಮುನ್ನ ದೇವಾಲಯದ ಬಹುತೇಕ ಅರ್ಚಕರು ಕೇಸರಿ ವಸ್ತ್ರ ಧರಿಸಿದ್ದರು. ಕೆಲವು ಪುರೋಹಿತರು ಹಳದಿ ಬಣ್ಣದ ಉಡುಪಿನಲ್ಲಿ ಬರುತ್ತಿದ್ದರು, ಆದರೆ ಇದು ಕಡ್ಡಾಯವಾಗಿರಲಿಲ್ಲ.

26 ಮಂದಿ ಅರ್ಚಕರು ವಿವಿಧ ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ರಚಿಸಿರುವ ಧಾರ್ಮಿಕ ಸಮಿತಿಯು ಹೊಸದಾಗಿ ತರಬೇತಿ ಪಡೆದ 21 ಅರ್ಚಕರನ್ನು ಸೇರಿಸಲು ನಿರ್ಧರಿಸಿದೆ.
ಅರ್ಚಕರು ತಮ್ಮ ಆ್ಯಂಡ್ರಾಯ್ಡ್​ ಮೊಬೈಲ್​ನೊಂದಿಗೆ ದೇವಸ್ಥಾನಕ್ಕೆ ಬರುವುದನ್ನು ಟ್ರಸ್ಟ್​ ನಿಷೇಧಿಸಿದೆ. ಅಗತ್ಯವಿದ್ದರೆ ಸಂವಹನಕ್ಕಾಗಿ ಕೀಪ್ಯಾಡ್​ ಫೋನ್​ಗಳನ್ನು ಮಾತ್ರ ಬಳಸಬಹುದು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ