ಗರ್ಭನಿರೋಧಕ ಸಾಧನ ಕೈಯಲ್ಲಿ ಹಿಡಿದುಕೊಂಡು ಜನಿಸಿದ ಮಗು!

ಬ್ರೆಜಿಲ್: ಮಗುವೊಂದು ಜನಿಸಿದ ವೇಳೆ ಗರ್ಭನಿರೋಧಕ ಸಾಧನವನ್ನು ಕೈಯಲ್ಲಿ ಹಿಡಿದುಕೊಂಡು ಜನಿಸಿರುವ ಅಪರೂಪದ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಈ ಫೋಟೋ ಇದೀಗ ಆನ್ ಲೈನ್ ನಲ್ಲಿ ವೈರಲ್ ಆಗಿದೆ.
ಕ್ವೆಡಿ ಅರೌಜೊ ಡಿ ಒಲಿವೆರಾ ಎಂಬವರು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಜನ್ಮ ನೀಡಿದ ವೇಳೆ ಮಗು ಗರ್ಭನಿರೋಧಕ ಸುರುಳಿ (Contraceptive Coil)ಯನ್ನು ಕೈಯಲ್ಲಿ ಹಿಡಿದುಕೊಂಡು ಜನಿಸಿದೆ.
ಘಟನೆ ಹಿನ್ನೆಲೆ:
ತಾಯಿ ಕ್ವೆಡಿ ಅರೌಜೊ ಡಿ ಒಲಿವೆರಾ ಗರ್ಭಧಾರಣೆ ತಡೆಗಟ್ಟಲು ಟಿ—ಆಕಾರದ ಗರ್ಭನಿರೋಧಕ ಸುರುಳಿ– Contraceptive Coil ಅಳವಡಿಸಿದ್ದರು. ಕಳೆದ ಎರಡು ವರ್ಷಗಳಿಂದ ಇದನ್ನು ಬಳಕೆ ಮಾಡುತ್ತಿದ್ದರು. ಈ ಸಾಧನ 10 ವರ್ಷಗಳ ವರೆಗೆ ಬಳಕೆ ಮಾಡಬಹುದಾಗಿದೆ. ಈ ಗರ್ಭ ನಿರೋಧಕ ಶೇ.99 ಪರಿಣಾಮಕಾರಿ ಎಂದು ನಂಬಲಾಗುತ್ತದೆ.
ಆದರೆ, ಕ್ವೆಡಿ ನಿಯಮಿತ ಪರೀಕ್ಷೆಯ ಸಮಯದಲ್ಲಿ ತಾನು ಗರ್ಭಿಣಿಯಾಗಿರುವುದು ತಿಳಿದು ಶಾಕ್ ಆಗಿದ್ದರು. ಅಲ್ಲದೇ ಈ ಗರ್ಭನಿರೋಧಕ ಸಾಧನವನ್ನು ತೆಗೆಸಲು ವೈದ್ಯರ ಮೊರೆಹೋಗಿದ್ದರು. ಆದ್ರೆ, ಗರ್ಭ ಧರಿಸಿರುವ ಈ ಸಂದರ್ಭದಲ್ಲಿ ಆ ಸಾಧನವನ್ನು ತೆಗೆಯುವುದು ಅಪಾಯ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಆ ಸಾಧನ ಗರ್ಭದೊಳಗೆ ಉಳಿಯಿತು. ಮತ್ತು ಮಗು ಜನಿಸಿದ ವೇಳೆ ಮಗು ಕೈಯಲ್ಲಿ ಹಿಡಿದುಕೊಂಡು ಹೊರ ಬರುವ ಮೂಲಕ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದ ಹಾಗೆ, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD