ವಿದ್ಯಾರ್ಥಿನಿಯನ್ನು ಊಟಕ್ಕೆ ಮನೆಗೆ ಕರೆದು ಲೈಂಗಿಕ ದೌರ್ಜನ್ಯ: ಕಾಲೇಜು ಎಚ್ ಒಡಿ ವಿರುದ್ಧ ದೂರು - Mahanayaka

ವಿದ್ಯಾರ್ಥಿನಿಯನ್ನು ಊಟಕ್ಕೆ ಮನೆಗೆ ಕರೆದು ಲೈಂಗಿಕ ದೌರ್ಜನ್ಯ: ಕಾಲೇಜು ಎಚ್ ಒಡಿ ವಿರುದ್ಧ ದೂರು

stop rape
08/10/2025

ಬೆಂಗಳೂರು: ಖಾಸಗಿ ಕಾಲೇಜಿನ ವಿಭಾಗದ ಮುಖ್ಯಸ್ಥನೊಬ್ಬ ವಿದ್ಯಾರ್ಥಿನಿಯನ್ನು ಊಟದ ನೆಪದಲ್ಲಿ ಮನೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಘಟನೆ ಸಂಬಂಧ ತಿಲಕ್​ನಗರ ಪೊಲೀಸ್ ಠಾಣೆಗೆ ಸಂತ್ರಸ್ಥೆ ದೂರು ನೀಡಿದ್ದಾಳೆ.

ವಿದ್ಯಾರ್ಥಿನಿಗೆ ಕಡಿಮೆ ಹಾಜರಾತಿ ಇದ್ದುದನ್ನೇ ಮುಂದಿಟ್ಟುಕೊಂಡು, ಪೂರ್ಣ ಅಂಕ ನೀಡುವ ಆಮಿಷವೊಡ್ಡಿ ಉಪನ್ಯಾಸಕರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿ ಸಂಜೀವ್ ಕುಮಾರ್ ಮಂಡಲ್ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಬಿಸಿಎ) ವಿದ್ಯಾರ್ಥಿನಿಯನ್ನು ಅಕ್ಟೋಬರ್ 2 ರಂದು ತನ್ನ ಮನೆಗೆ ಕರೆಸಿಕೊಂಡಿದ್ದಾರೆ. ತನ್ನ ಕುಟುಂಬದೊಂದಿಗೆ ಜತೆಯಾಗಿ ಊಟ ಮಾಡೋಣ ಎಂದು ವಿದ್ಯಾರ್ಥಿನಿಯನ್ನು ಕರೆಸಿಕೊಂಡಿದ್ದಾರೆ. ಆದರೆ, ವಿದ್ಯಾರ್ಥಿನಿ ಅವರ ಮನೆಗೆ ತೆರಳಿದಾಗ ಮೊಂಡಲ್ ಒಬ್ಬಂಟಿಯಾಗಿ ಮನೆಯಲ್ಲಿದ್ದರು. ಆ ಬಳಿಕ ಅವರು ವಿದ್ಯಾರ್ಥಿನಿಗೆ ಊಟ ನೀಡಿದ್ದಾರೆ. ಆದರೆ, ಮೊಂಡಲ್ ಒಬ್ಬರೇ ಇದ್ದುದರಿಂದ ಇರಿಸುಮುರಿಸಿಗೆ ಒಳಗಾದ ವಿದ್ಯಾರ್ಥಿನಿ ತಾನು ಹೊರಡುವುದಾಗಿ ಹೇಳಿದ್ದಾಳೆ.

ವಿದ್ಯಾರ್ಥಿನಿ ಹೊರಡಲು ಅನುವಾಗುತ್ತಿದ್ದಂತೆಯೇ ಎಚ್​​ಒಡಿ, ನಿನಗೆ ಹಾಜರಾತಿ ಕಡಿಮೆ ಇದೆ. ನನ್ನೊಂದಿಗೆ ಸಹಕರಿಸು, ಪೂರ್ಣ ಅಂಕಗಳನ್ನು ಕೊಡಿಸಲು ಸಹಾಯ ಮಾಡುತ್ತೇನೆ ಎಂದಿದ್ದಾರೆ. ಅಷ್ಟರಲ್ಲಿ ಸ್ನೇಹಿತೆಯಿಂದ ಫೋನ್ ಕರೆ ಬಂದಿದ್ದು, ತುರ್ತಾಗಿ ಹೋಗಬೇಕಿದೆ ಎಂದು ಎಚ್ ​ಒಡಿ ಮನೆಯಿಂದ ಹೇಗೋ ತಪ್ಪಿಸಿಕೊಂಡು ಬಂದೆ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿದ್ಯಾರ್ಥಿನಿಯ ದೂರಿನ ಮೇರೆಗೆ ತಿಲಕ್‌ ನಗರ ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಡಿಯಲ್ಲಿ ಎಫ್‌ ಐಆರ್ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler