ಅಖಿಲೇಶ್ ಯಾದವ್ ರಾಮಮಂದಿರ ಭೇಟಿ: 'ಧರ್ಮ ಎಂಬುದು ವೈಯಕ್ತಿಕ ನಂಬಿಕೆಯ ವಿಷಯ' ಎಂದ ಕಾಂಗ್ರೆಸ್! - Mahanayaka

ಅಖಿಲೇಶ್ ಯಾದವ್ ರಾಮಮಂದಿರ ಭೇಟಿ: ‘ಧರ್ಮ ಎಂಬುದು ವೈಯಕ್ತಿಕ ನಂಬಿಕೆಯ ವಿಷಯ’ ಎಂದ ಕಾಂಗ್ರೆಸ್!

akhilesh yadav
08/11/2026

ಲಕ್ನೋ/ನವದೆಹಲಿ: ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಮುಂಬರುವ ಅಯೋಧ್ಯೆ ರಾಮಮಂದಿರ ಭೇಟಿಯ ಕುರಿತು ಕಾಂಗ್ರೆಸ್ ಪಕ್ಷ ಪ್ರತಿಕ್ರಿಯಿಸಿದ್ದು, “ಧರ್ಮ ಮತ್ತು ಆರಾಧನೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ನಂಬಿಕೆಯ ವಿಷಯ” ಎಂದು ಹೇಳಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಡಿಸೆಂಬರ್ 12 ರಂದು ತಮ್ಮ ಕುಟುಂಬದೊಂದಿಗೆ ಅಯೋಧ್ಯೆಯ ಹನುಮಾನ್ ಗರ್ಹಿ ಹಾಗೂ ರಾಮಮಂದಿರಕ್ಕೆ ಭೇಟಿ ನೀಡಿ ರಾಮ್ ಲಲ್ಲಾನ ದರ್ಶನ ಪಡೆಯಲಿದ್ದಾರೆ ಎಂದು ಎಸ್‌ಪಿ ನಾಯಕ ಪವನ್ ಪಾಂಡೆ ತಿಳಿಸಿದ್ದಾರೆ. ಜನವರಿ 2024 ರಲ್ಲಿ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆದ ನಂತರ ಅಖಿಲೇಶ್ ಅವರ ಮೊದಲ ಅಯೋಧ್ಯೆ ಭೇಟಿ ಇದಾಗಿದೆ.

ಈ ವಿಚಾರವಾಗಿ ಬಿಜೆಪಿಯ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್, “ದೇವಾಲಯ, ಮಸೀದಿ, ಗುರುದ್ವಾರ ಅಥವಾ ಚರ್ಚ್‌ಗೆ ಹೋಗುವುದು ಅವರವರ ವೈಯಕ್ತಿಕ ಆಯ್ಕೆಯಾಗಿದೆ. ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಹಾಗಾಗಿ ರಾಜಕೀಯ ನಾಯಕರು ಇದನ್ನು ಪ್ರಶ್ನಿಸುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಅಖಿಲೇಶ್ ಯಾದವ್ ಅವರ ಭೇಟಿ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಅವರು 1990 ರಲ್ಲಿ ಕರಸೇವಕರ ಮೇಲೆ ನಡೆದ ಗುಂಡಿನ ಚಕಮಕಿ ಘಟನೆಯನ್ನು ನೆನಪಿಸಿ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler