ಬೆಳಗಿನ ಕಾಫಿ ಕುಡಿದ ತಕ್ಷಣ ಹೃದಯ ಬಡಿತ ವೇಗವಾಗುತ್ತದೆಯೇ? ಕಾರಣ ಏನು ಗೊತ್ತಾ?
ಅನೇಕರಿಗೆ ಬೆಳಿಗ್ಗೆ ಬಿಸಿಬಿಸಿ ಕಾಫಿ ಕುಡಿಯುವುದು ದಿನನಿತ್ಯದ ಅಭ್ಯಾಸ. ಆದರೆ ಕಾಫಿ ಕುಡಿದ ತಕ್ಷಣ ಕೆಲವರಿಗೆ ಹೃದಯ ಜೋರಾಗಿ ಬಡಿದುಕೊಳ್ಳುವ (Heart Palpitations) ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಕಾಫಿಯಲ್ಲಿರುವ ಕೆಫೀನ್ ಪ್ರಭಾವ ಎಂದು ಭಾವಿಸಲಾಗುತ್ತದೆ. ಆದರೆ ಪ್ರತಿಯೊಂದು ಬಾರಿಯೂ ಇದು ಕೆಫೀನ್ ನಿಂದಲೇ ಆಗುತ್ತದೆ ಎಂದಲ್ಲ, ಇದರ ಹಿಂದೆ ಇತರ ಆರೋಗ್ಯ ಸಮಸ್ಯೆಗಳೂ ಇರಬಹುದು.
ಕಾಫಿ ಕುಡಿದಾಗ ಹೃದಯದ ಬಡಿತ ಏಕೆ ವೇಗವಾಗುತ್ತದೆ?
ಕೆಫೀನ್ ನಮ್ಮ ಕೇಂದ್ರ ನರಮಂಡಲವನ್ನು (Central Nervous System) ಪ್ರಚೋದಿಸುವ ಒಂದು ವಸ್ತುವಾಗಿದೆ. ಇದು ರಕ್ತದೊತ್ತಡ ಮತ್ತು ಹೃದಯದ ಬಡಿತವನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಕೆಫೀನ್ ಬೇಗನೆ ದೇಹಕ್ಕೆ ಹೀರಿಕೊಳ್ಳಲ್ಪಡುತ್ತದೆ. ಪ್ರತಿಯೊಬ್ಬರ ದೇಹವೂ ಕೆಫೀನ್ ಗೆ ಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಕಾಫಿ ಅಭ್ಯಾಸವಿಲ್ಲದವರಿಗೆ ಅಥವಾ ಕೆಫೀನ್ ಸಂವೇದನಾಶೀಲತೆ ಇದ್ದವರಿಗೆ ಸಣ್ಣ ಪ್ರಮಾಣದ ಕಾಫಿಯೂ ಹೃದಯ ಬಡಿತ ಹೆಚ್ಚಿಸಬಹುದು.
ಇದು ಅಪಾಯಕಾರಿಯೇ?
ಕಾಫಿ ಕುಡಿದ ನಂತರ ಕೆಲವೇ ಸೆಕೆಂಡುಗಳು ಅಥವಾ ಒಂದೆರಡು ನಿಮಿಷಗಳ ಕಾಲ ಹೃದಯ ಬಡಿತ ಹೆಚ್ಚಾಗಿ, ಬಳಿಕ ತಾನಾಗಿಯೇ ಸರಿಯಾದರೆ ಆತಂಕಪಡುವ ಅಗತ್ಯವಿಲ್ಲ. ನಿರಂತರ (Dehydration), ಸರಿಯಾದ ನಿದ್ರೆಯಿಲ್ಲದಿರುವುದು, ಮಾನಸಿಕ ಒತ್ತಡ ಅಥವಾ ಆತಂಕ (Anxiety) ಕೂಡ ಇದಕ್ಕೆ ಕಾರಣವಾಗಬಹುದು.
ಹೃದಯ ಬಡಿತ ವೇಗವಾಗುವುದರ ಜೊತೆಗೆ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯಕೀಯ ತಪಾಸಣೆ ಅಗತ್ಯ:
- ಎದೆ ನೋವು ಅಥವಾ ಕಿರಿಕಿರಿ (Chest Pain): ಎದೆಯಲ್ಲಿ ಭಾರ ಅಥವಾ ನೋವಿನ ಅನುಭವ.
- ಉಸಿರಾಟದ ತೊಂದರೆ (Shortness of Breath): ನಿರಾಳವಾಗಿ ಉಸಿರಾಡಲು ಸಾಧ್ಯವಾಗದಿರುವುದು.
- ತಲೆಸುತ್ತು ಅಥವಾ ಪ್ರಜ್ಞೆ ತಪ್ಪುವುದು (Dizziness or Fainting): ಸಡನ್ ಆಗಿ ಕಣ್ಣು ಕತ್ತಲೆ ಬರುವುದು.
- ಅತಿಯಾದ ಆಯಾಸ ಮತ್ತು ಬೆವರು: ದೈಹಿಕ ಶ್ರಮವಿಲ್ಲದಿದ್ದರೂ ಅತಿಯಾಗಿ ಬೆವರವುದು.
- ದೀರ್ಘಕಾಲದ ಬಡಿತ: ಹೃದಯದ ಬಡಿತವು ಬಹಳ ಹೊತ್ತು ವೇಗವಾಗಿಯೇ ಉಳಿವುದು ಅಥವಾ ಪದೇ ಪದೇ ಮರುಕಳಿಸುವುದು.
ಇತರ ಆರೋಗ್ಯ ಕಾರಣಗಳು:
ಕಾಫಿ ಮಾತ್ರವೇ ಅಲ್ಲದೆ, ಥೈರಾಯ್ಡ್ ಸಮಸ್ಯೆಗಳು (Thyroid problems), ರಕ್ತಹೀನತೆ (Anaemia), ಎಲೆಕ್ಟ್ರೋಲೈಟ್ ಅಸಮತೋಲನ ಅಥವಾ ಹೃದಯದ ನೈಸರ್ಗಿಕ ಲಯದಲ್ಲಿ ವ್ಯತ್ಯಾಸ (Arrhythmia) ಇದ್ದಾಗಲೂ ಹೀಗಾಗಬಹುದು.
ತಜ್ಞರ ಸಲಹೆ:
- ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದನ್ನು ತಪ್ಪಿಸಿ.
- ದಿನಕ್ಕೆ ಸಾಕಷ್ಟು ನೀರು ಕುಡಿಯಿರಿ.
- ನಿರಂತರವಾಗಿ ಈ ಸಮಸ್ಯೆ ಕಂಡುಬಂದರೆ ನಿಮ್ಮ ಕಾಫಿ ಸೇವನೆ ಮತ್ತು ಲಕ್ಷಣಗಳ ಬಗ್ಗೆ ಡೈರಿಯಲ್ಲಿ ನೋಟ್ ಮಾಡಿ ವೈದ್ಯರಿಗೆ ತೋರಿಸಿ.


























